ರಾಷ್ಟ್ರೀಯ

ಚೆನ್ನೈನ ಮೊದಲ ಮೆಟ್ರೋ ರೈಲು ಚಾಲನೆ ಮಾಡಿದ್ದು ಮಹಿಳೆ

Pinterest LinkedIn Tumblr

7654chennai-woman-driver-650_650x400_51435570229ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಇಂದಿನಿಂದ ಮೆಟ್ರೋ ರೈಲು ಸಂಚಾರ ಆರಂಭಗೊಂಡಿದೆ. ಮುಖ್ಯಮಂತ್ರಿ ಜಯಲಲಿತಾ ತಮ್ಮ ಕಛೇರಿಯಿಂದಲೇ ರೈಲು ಹೊರಡಲು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಈ ಮಹಿಳೆ ಅದನ್ನು ಚಲಾಯಿಸುವ ಮೂಲಕ ಚೆನ್ನೈ ಮೆಟ್ರೋ ರೈಲಿನ ಮೊದಲ ಮಹಿಳಾ ಚಾಲಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಅಲಂದೂರು ರೈಲ್ವೇ ನಿಲ್ದಾಣದಿಂದ ಮೆಟ್ರೋ ರೈಲು ಚಾಲನೆ ಮಾಡಿದ 28 ವರ್ಷದ ಪ್ರೀತಿ 10 ಕಿಲೋ ಮೀಟರ್ ದೂರದ ಕೋಯಂಬೇಡನ್ನು ತಲುಪಲು 18 ನಿಮಿಷಗಳ ಕಾಲ ತೆಗೆದುಕೊಂಡರು. ಇದು ಪ್ರಥಮ ದಿನವಾದ್ದರಿಂದ ಮೆಟ್ರೋ ರೈಲನ್ನು ನೋಡಲು ಹಾಗೂ ಅದರಲ್ಲಿ ಸಂಚರಿಸಲು ಜನ ಮುಗಿ ಬಿದ್ದ ಕಾರಣ ಇಷ್ಟು ವಿಳಂಬವಾಯಿತೆಂದು ಹೇಳಲಾಗಿದೆ.

ಮೊದಲ ದಿನದಂದು 1,276 ಮಂದಿ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದು, 45 ಕಿ.ಮೀ. ವ್ಯಾಪ್ತಿಯಲ್ಲಿ ಈ ಮೆಟ್ರೋ ರೈಲು ಸಂಚರಿಸಲಿದೆ. ಇದಕ್ಕಾಗಿ 16,500 ಕೋಟಿ ರೂ. ವೆಚ್ಚವಾಗಿದೆ. ಮುಂದಿನ ಹಂತದ ಕಾಮಗಾಗಿ ಮುಗಿದ ಬಳಿಕ ಮೆಟ್ರೋ ರೈಲು ಚೆನ್ನೈ ಸೆಂಟ್ರಲ್ ವರೆಗೂ ಹೋಗಲಿದೆ ಎಂದು ಹೇಳಲಾಗಿದೆ.

Write A Comment