ಅಂತರಾಷ್ಟ್ರೀಯ

ತಾತನ ಮೃತದೇಹದೊಂದಿಗೆ ಮೊಮ್ಮಗನ ಸೆಲ್ಫಿ!

Pinterest LinkedIn Tumblr

saudi-teenagers-selfieಲಂಡನ್: ತಾತನ ಮೃತದೇಹದೊಂದಿಗೆ ತೆಗೆದ ಸೌದಿ ಅರೇಬಿಯಾದ ಬಾಲಕ ಸೆಲ್ಫಿ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೀಡಾಗಿದೆ.

ಆಸ್ಪತ್ರೆಯ ಬೆಡ್‌ನಲ್ಲಿರುವ ಮೃತ ಶರೀರದ ಮುಂದೆ ನಿಂತು ಸೆಲ್ಫಿ ಪೋಸ್‌ನಲ್ಲಿ ಫೋಟೋ ತೆಗೆದ ಬಾಲಕ , Good bye Grand Father ಎಂದು ಬರೆದು ಸಾಮಾಜಿಕ ತಾಣದಲ್ಲಿ ಫೋಟೋ ಅಪ್‌ಲೋಡ್ ಮಾಡಿದ್ದನು.

ಈ ಫೋಟೋ ನೋಡಿ ಹುಡುಗನ ಹುಡುಗಾಟಿಕೆ ಮತ್ತು ಪೆದ್ದುತನದ ಬಗ್ಗೆ ಎಲ್ಲರಿಗೂ ಅಚ್ಚರಿಯಾಗಿದೆ. ಹೆಚ್ಚಿನವರು ಈ ಬಾಲಕನಿಗೆ ಬೈದು ಕಾಮೆಂಟ್‌ಗಳನ್ನೂ ಹಾಕಿದ್ದಾರೆ.

ಆದಾಗ್ಯೂ, ಈ ಬಾಲಕ ಆಸ್ಪತ್ರೆಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಸೆಲ್ಫಿ ತೆಗೆಯಲು ಅನುವು ಮಾಡಿದ್ದ ಆಸ್ಪತ್ರೆಯ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಮೆದಿನಾದ ಆರೋಗ್ಯ ಇಲಾಖೆ ಹೇಳಿದೆ.

ಬಾಲಕನ ವರ್ತನೆಯನ್ನು ಖಂಡಿಸಿದ ಮೆದೀನಾದ ಸಾರ್ವಜನಿಕ ಸಂಪರ್ಕ ಹಾಗೂ ಮಾಧ್ಯಮದ ಮೇಲಾಧಿಕಾರಿ ಅಬ್ದುಲ್ ರಜಾಕ್ ಈ ಸೆಲ್ಫಿ ಬಾಲಕನ ಸಾಮಾಜಿಕ ಪ್ರಜ್ಞೆಯ ಕೊರತೆ ಹಾಗೂ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ ಎಂದಿದ್ದಾರೆ.

Write A Comment