ವರದಿ : ಈಶ್ವರ ಎಂ. ಐಲ್
ಮುಂಬಯಿ : ಮುಂಬಯಿಯ ಹಿರಿಯ ಕಸ್ಟಮ್ಸ್ ಅಧಿಕಾರಿ ಕನ್ನಡಿಗ ಎರ್ಮಾಳು ರೋಹಿತ್ ಹೆಗ್ಡೆ ಅವರನ್ನು ಮುಂಬಯಿ ಕಸ್ಟಮ್ಸ್ ಸಹಾಯಕ ಕಮಿಶನರಾಗಿ ಮಹಾರಾಷ್ಟ್ರ ಸರಕಾರವು ಭಡ್ತಿ ನೀಡಿದೆ. ಮುಂಬಯಿ ವಿಮಾನ ನಿಲ್ಧಾಣ, ಕಾರ್ಗೋ, ಬಂದರುಗಳಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸ್ತುತ ನವಿಮುಂಬಯಿಯಲ್ಲಿ ನವ ಶೇವಾ ಬಂದರಿನಲ್ಲಿ ಕರ್ತವ್ಯ ನಿರತರಾಗಿದ್ದಾರೆ, 1980ರಲ್ಲಿ ಕಸ್ಟಮ್ಸ್ ನಲ್ಲಿ ಅಧಿಕಾರಿಯಾಗಿ ನೇಮಕಗೊಂಡರು.
ಮುಂಬಯಿಯ ಕಸ್ಟಮ್ಸ್ ವಿಭಾಗದಲ್ಲಿ ನಿಷ್ಟ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಏರ್ಮಾಳು ರೋಹಿತ್ ಹೆಗ್ಡೆ ಯವರು ಇದೀಗ ಕಸ್ಟಮ್ಸ್ ಸಹಾಯಕ ಕಮಿಶನರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕಟಪಾಡಿಯ ಏಣಗುಡ್ಡೆ ದೊಡ್ಡಮನೆ ದಿ. ಚಿತ್ತರಂಜನ್ ದಾಸ್ ಹೆಗ್ಡೆ, ಸಾಣೂರು ಗುತ್ತು ತಾರಾ ಸಿ. ಹೆಗ್ದೆ ದಂಪತಿಯ ಮಗನಾದ ರೋಹಿತ್ ಹೆಗ್ಡೆಯವರು ಅದಮಾರು ಪೂರ್ಣಪ್ರಜ್ನ ವಿದ್ಯಾಸಂಸ್ಥೆಯಲ್ಲಿ ಪ್ರೌಡ ಶಿಕ್ಷಣವನ್ನು ಪೂರೈಸಿದರು. ಸುರತ್ಕಲ್ ಗೋವಿಂದದಾಸ್ ಕಾಲೇನಿನಲ್ಲಿ ಪದವಿ ಪಡೆದಿದ್ದಾರೆ. ಶಾಲಾ ದಿನಗಳಲ್ಲಿ ಅತ್ಲೆಟಿಕ್ ನಲ್ಲಿ ವಿಶೇಷ ಸಾಧನೆ ಮಾಡಿ ರಾಷ್ಟ್ರೀಯ ಚಾಂಪಿಯನ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಕ್ರೀಡಾ ಸಾಧನೆಗೆ ಮಹಾರಾಷ್ಟ್ರ ಸರಕಾರ ಛತ್ರಪತಿ ಶಿವಾಜಿ ಪ್ರಶಸ್ತಿ ನೀಡಿ ಗೌರವಿಸಿದೆ ಅಲ್ಲದೆ ಕಸ್ಟಮ್ಸ್ ನಲ್ಲಿ ಉನ್ನತನ್ ಪದವಿಯನ್ನು ನೀಡಿದೆ.
ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳಲ್ಲಿ ಸದ್ದಿಲ್ಲದೆ ಸೇವೆಮಾಡುತ್ತಿದ್ದ ಇವರು ತುಳುನಾಡಿನ ಗ್ರಾಮೀಣ ಕ್ರೀಡೆಯಾಗಿರುವ ಕಂಬಳ ಪ್ರೇಮಿಯಾಗಿದ್ದು ಕಳೆದ 20 ವರ್ಷಗಳಿಂದ ಕಟಪಾಡಿಯ ಬೀಡು ಕಂಬಳ ಸಮಿತಿಯ ಅಧ್ಯಕ್ಷರಾಗಿ ಕಂಬಳ ಕ್ರೀಡೆಯನ್ನು ನಡೆಸುತ್ತಿದ್ದಾರೆ. ಉಚ್ಚಿಲ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ, ಏರ್ಮಾಳು ಜನಾರ್ಧನ ದೇವಸ್ಥಾನದ ಬ್ರಹ್ಮ ಕಲಸ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಏರ್ಮಾಳು ರೋಹಿತ್ ಹೆಗ್ದೆ ಸಹಾಯಕ ಕಮಿಶನರಾಗಿ ನಿಯುಕ್ತಿಗೊಂಡಿರುದಕ್ಕೆ ಸಂಸದ ಗೋಪಾಲ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜಾಕತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಉದ್ಯಮಿ ಏರ್ಮಾಳು ಹರೀಶ್ ಶೆಟ್ಟಿ, ಬಂಟ್ಸ ನ್ಯಾಯ ಮಂಡಳಿಯ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅಭಿನಂದನೆ ಸಲ್ಲಿಸಿರುವರು.