ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಕುರಿತಾಗಿ ಎಲ್ಲರಿಗೂ ಗೊತ್ತೇ ಇದೆ. ಆದರೆ ವಿಷಯವಿರುವುದು ಅದರಲ್ಲಲ್ಲ. ಬದಲಾಗಿ ನೀಲಿ ಚಿತ್ರಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿ ಬಾಲಿವುಡ್ ಗೆ ಬಂದು ತನ್ನ ಪ್ರತಿಭೆಯ ಮೂಲಕ ಅಭಿಮಾನಿಗಳ ಮನಗೆದ್ದ ಸನ್ನಿ ಲಿಯೋನ್ ಕುರಿತು ಡಾಕ್ಯುಮೆಂಟರಿಯೊಂದು ಸಿದ್ದವಾಗಿದೆ.
ಈ ಡಾಕ್ಯುಮೆಂಟರಿಯಲ್ಲಿ ಸನ್ನಿ ಅಮೆರಿಕದಲ್ಲಿ ಪೋರ್ನ್ ಸ್ಟಾರ್ ಆಗಿ ಹೆಸರು ಮಾಡಿದ್ದ ಸನ್ನಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಬಗೆ, ಹಾಗೂ ಇನ್ನು ನೀಲಿ ಚಿತ್ರ ಜಗತ್ತಿಗೆ ಸನ್ನಿ ಬಂದದ್ದು ಏಕೆ ಎಂಬುದರ ಕುರಿತು ವಿಸ್ತಾರವಾದ ಚಿತ್ರಣವಿದ್ದು ದಿ ಗುಡ್, ದಿ ಬ್ಯಾಡ್, ದಿ ಅಗ್ಲಿ ಎಂಬ ಹೆಸರಿನ ಈ ಡಾಕ್ಯುಮೆಂಟರಿಯಲ್ಲಿ ಸನ್ನಿಯ ಜೀವನದ ರಹಸ್ಯಗಳನ್ನೆಲ್ಲ ಬೆತ್ತಲೆ ಮಾಡಲಾಗಿದೆಯಂತೆ.
ವಿಶೇಷವೆಂದರೆ ಈಗಾಗಲೇ ಶೂಟಿಂಗ್ ಪೂರ್ಣಗೊಂಡಿರುವ ಈ ಡಾಕ್ಯುಮೆಂಟರಿಯಲ್ಲಿ ದಿಲೀಪ್ ಮೆಹ್ತಾ ತಯಾರಿಸಿದ್ದು ಸನ್ನಿಯ ಆರಂಭಿಕ ಜೀವನ, ಪೋರ್ನ್ ಲೋಕಕ್ಕೆ ಎಂಟ್ರಿಯಾಗಿದ್ದು, ಅಲ್ಲಿಯ ಕಷ್ಟಸುಖಗಳು ಇತ್ಯಾದಿ ಬಹಳ ಸೂಕ್ಷ್ಮ ವಿವರಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆಯಂತೆ.
ಏನೇ ಇರಲಿ, ಸನ್ನಿಯ ದೇಹ ಸೌಂದರ್ಯವನ್ನು ಕಣ್ತುಂಬಿಕೊಂಡ ರಸಿಕರಿಗೆ ನಿಜ ಜೀವನದ ರಹಸ್ಯವನ್ನು ನೋಡಿ ಏನೆನ್ನುತ್ತಾರೋ ಕಾದು ನೋಡಬೇಕಿದೆ.