ಕರ್ನಾಟಕ

ಹೊಟ್ಟೆ ಹುಳುವಿಗೆ ಇಲ್ಲಿದೆ ರಾಮಬಾಣ

Pinterest LinkedIn Tumblr

2642intestinal-worms-home-remediesಜಂತುಹುಳದ ಅಥವಾ ಹೊಟ್ಟೆ ಹುಳುವಿನ ತೊಂದರೆಯಿಂದಾಗಿ ಮುಖದ ಮೇಲೆ ಬಿಳಿ ಬಣ್ಣದ ಕಲೆಗಳಾಗಬಹುದು.  ದೇಹದಲ್ಲಿ ಚೈತನ್ಯವಿಲ್ಲದಂತೆ ಅನಿಸಬಹುದು. ಆಗಾಗ ಹೊಟ್ಟೆನೋವು,  ಹೊಟ್ಟೆಯಲ್ಲಿ ಏನೋ ಕಚ್ಚಿದಂತೆ ಆಗಬಹುದಾಗಿದ್ದು ಅದನ್ನು ನಿವಾರಿಸಲು ಮನೆಯಲ್ಲಿಯೇ ಮಾಡಬಹುದಾದ ಮದ್ದಿನ ಮಾಹಿತಿ ಇಲ್ಲಿದೆ.

ದೇಹವನ್ನು ನಿರುತ್ಸಾಹಗೊಳಿಸುವ ಜಂತು ಹುಳುವಿನ ತೊಂದರೆಗೆ ಪ್ರತಿ ಆರು ತಿಂಗಳಿಗೆ ಒಮ್ಮೆ ಆದರೂ ಔಷಧಿ ತೆಗೆದುಕೊಳ್ಳಬೇಕೆಂದು ಹೇಳಲಾಗುತ್ತದೆ. ಅದರ ಹೊರತಾಗಿಯೂ ಮನೆಯಲ್ಲಿಯೇ ಕೆಲವು ಮದ್ದುಗಳನ್ನು ಮಾಡಿಕೊಂಡು ಆಗಾಗ ಕುಡಿಯುವುದರಿಂದ ಜಂತುಹುಳುವಿನ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

# ಕಹಿ ಜೀರಿಗೆಗೆ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು,  ನಂತರ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಳ್ಳಬೇಕು. ಈ ಕಷಾಯವನ್ನು ತಿಂಗಳಿಗೆ ಒಮ್ಮೆಯಾದರೂ ಕುಡಿದರೆ ಆರೋಗ್ಯಕ್ಕೆ ಉತ್ತಮ.

# ಪ್ರತಿನಿತ್ಯ ಅಥವಾ ವಾರದಲ್ಲಿ ಎರಡು ಬಾರಿ ಆದರೂ ತಾಂಬೂಲದ ಸೇವನೆ ಮಾಡುವುದರಿಂದ ಜಂತುಹುಳುವಿನ ಸಮಸ್ಯೆ ಆಗದಂತೆ ತಡೆಯಬಹುದು.

# ಜಂತುಹುಳುವಿನ ಸಮಸ್ಯೆಯಿಂದಾಗಿ ಹೊಟ್ಟೆನೋವು ಬರುತ್ತಿದ್ದರೆ,  ಪಪ್ಪಾಯಿ ಹಣ್ಣಿನ ಬೀಜವನ್ನುನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು.ರಾತ್ರಿ ಮಲಗುವ ಮೊದಲು ಒಂದು ಚಮಚದಷ್ಟು ಪುಡಿಯನ್ನ ಬಿಸಿನೀರಿನಲ್ಲಿ ಬೆರೆಸಿ ಕುಡಿಯಬೇಕು. ಏಳು ದಿನಗಳ ಕಾಲ ಇದನ್ನು ತೆಗೆದುಕೊಂಡರೆ,  ಜಂತುಹುಳುವಿನ ತೊಂದರೆ ಕಡಿಮೆಯಾಗುತ್ತದೆ. ಹೊಟ್ಟೆನೋವು ಗುಣಮುಖವಾಗುತ್ತದೆ.

# ಜಂತುಹುಳುವಿನ ಸಮಸ್ಯೆಯಿದ್ದಾಗ ವಾಯು ವಿಡಂಗದ ಚೂರ್ಣವನ್ನು ಸ್ವಲ್ಪ ಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸಬೇಕು  (ಮೂರರಿಂದ ಆರು ಗ್ರಾಂನಷ್ಟು) ಅಥವಾ ವಾಯುವಿಡಂಗದ ಚೂರ್ಣವನ್ನುನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಆ ನೀರನ್ನು ಕುಡಿಯಬೇಕು. ದಿನಕ್ಕೆರಡು ಬಾರಿ  ಈ  ರೀತಿ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಸಮಸ್ಯೆ ದೂರವಾಗುತ್ತದೆ.

Write A Comment