ಕುಂದಾಪುರ; ಮನೆ ಸಮೀಪದಲ್ಲಿರುವ ದೊಡ್ಡಮ್ಮನ ಮನೆಗೆ ಹೋಗಿ ಬರುತ್ತೇನೆ ಎಂದು ಜೂನ್ ೨೯ರಂದು ಬೆಳಗ್ಗೆ ತಮ್ಮ ಮನೆಯಿಂದ ತೆರಳಿ ನಾಪತ್ತೆಯಾಗಿದ್ದ ಬಸ್ರೂರು ಮುಲ್ಲೆ ತೋಟ ಮಕ್ಕಿಮನೆ ನಿವಾಸಿ ಉಲ್ಫಿಯಾ (18) ಎಂಬ ಯುವತಿ ಮದುವೆಯಾಗಿ ಭಾನುವಾರ ವಾಪಾಸಾಗಿದ್ದಾಳೆ.
ನಾಪತ್ತೆಯಾದ ಆಕೆ ಬಸ್ರೂರು ನಿವಾಸಿ ನಿತೀಶ್ ಪೂಜಾರಿ ಎನ್ನುವನೊಂದಿಗೆ ಹಿಂದೂ ಪರ ಸಂಘಟನೆಯ ನೇತ್ರತ್ವದಲ್ಲಿ ಸಬ್ ರಿಜಿಸ್ಟ್ರ್ರರ್ ಕಚೇರಿಯಲ್ಲಿ ನೊಂದಣೆಯಾಗುವ ಮೂಲಕ ವಿವಾಹವಾಗಿದ್ದು, ವಿವಾಹದ ನಂತರ ಹೆಸರನ್ನು ಹಿಂದೂ ಹೆಸರಂತೆ ಬದಲಿಸಿಕೊಂಡಿರುವುದಾಗಿ ಬಲ್ಲ ಮೂಲಗಳು ತಿಳಿಸಿದೆ.
ಆಕೆ ಮನೆಯಿಂದ ಜೂ.೨೯ರಂದು ಕಾಣಿಯಾದ ಬಗ್ಗೆ ಆಕೆಯ ಸಹೋದರ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗಾ ಇಬ್ಬರು ಮದುವೆಯಾಗಿ ಬಂದಿದ್ದು ಮನೆಯವರು ಇವರನ್ನು ಯಾವ ರೀತಿ ಸ್ವೀಕರಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.