ರಾಷ್ಟ್ರೀಯ

ವ್ಯಾಪಂ ಹಗರಣದ ಕುರಿತು ಹೆಚ್ಚುತ್ತಿರುವ ನಿಗೂಢತೆ ! ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ನಮ್ರತಾಳನ್ನು ಕತ್ತು ಹಿಸಿಕು ಕೊಲೆ ಮಾಡಲಾಗಿದೆ : ಶವ ಪರೀಕ್ಷೆ ನಡೆಸಿದ ವೈದ್ಯರ ಹೇಳಿಕೆ

Pinterest LinkedIn Tumblr

namrata (1)

ಭೂಪಾಲ್: ವ್ಯಾಪಂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ನಮ್ರತಾ ದಾಮೋರ್ ಅವರದ್ದು ಸಹಜ ಸಾವಲ್ಲ, ಅವರನ್ನು ಕತ್ತು ಹಿಸಿಕು ಕೊಲೆ ಮಾಡಲಾಗಿತ್ತು ಎಂದು ಶವ ಪರೀಕ್ಷೆ ಮಾಡಿದ ವೈದ್ಯ ಬಿಬಿ ಪುರೋಹಿತ್ ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ವಾಹಿಸಿಯೊಂದರಲ್ಲಿ ಮಾತನಾಡಿರುವ ಅವರು, ವೈದ್ಯ ವೃತ್ತಿಯಲ್ಲಿ ನನಗೆ 25 ವರ್ಷವಾಗಿದೆ. ನಮ್ರತಾ ಅವರದ್ದು ಆತ್ಮಹತ್ಯೆ ಎಂದು ನೋಡಿದ ಕೂಡಲೇ ಹೇಳುವಂತಿತ್ತು. ನಮ್ರತಾ ಅವರದ್ದು ಕೊಲೆಯಲ್ಲ ಎಂದು ಹೇಳಲು ಕನಿಷ್ಟ ಪಕ್ಷ ಶೇ.1 ರಷ್ಟು ದಾಖಲೆಯೂ ಇಲ್ಲ. ದಾಮೋರ್ ಅವರ ಶವ ಆಸ್ಪತ್ರೆಗೆ ಬಂದಾಗ ಮೂವರು ವೈದ್ಯರು ಶವವನ್ನು ಪೋಸ್ಟ್ ಮಾರ್ಟಮ್ ಮಾಡಿದ್ದೆವು. ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಇದನ್ನು ಆತ್ಮಹತ್ಯೆ ಎಂದು ನಾವು ನಮೂದಿಸಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ನಮ್ರತಾ ದಾಮೋರ್ ಅವರ ಬಾಯಿ, ಮೂಗು, ಕತ್ತು ಹಾಗೂ ದೇಹದ ಕೆಲವು ಭಾಗಗಳ ಮೇಲೆ ಮೂಗೇಟುಗಳಿದ್ದದ್ದು ಕಂಡಿಬಂದಿತ್ತು. ದಾಮೋರ್ ಅವರನ್ನು ಕತ್ತು ಹಿಸುಕು ಹತ್ಯೆ ಮಾಡಿ ನಂತರ ಅವರನ್ನು ಎಳೆದುಕೊಂಡು ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಹಾಕಿರುವುದು ಇದರಿಂದ ತಿಳಿಯಬಹುದಾಗಿದೆ ಎಂದು ಹೇಳಿದ್ದಾರೆ.

ವೈದ್ಯರ ಈ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಮನೋಹರ್ ವರ್ಮಾ ಅವರು, ನಮ್ರತಾ ದಾಮೋರ್ ಅವರ ಶವವನ್ನು ನಾವು ಮತ್ತು ವಿಧಿವಿಜ್ಞಾನ ತಜ್ಞರು ನೋಡಿದ್ದೆವು. ತನಿಖೆ ವೇಳೆ ಇದಾವುದೂ ಕಂಡು ಬಂದಿರಲಿಲ್ಲ. ನಾವು ಯಾವುದನ್ನು ಮರುಸೃಷ್ಟಿಸಿಲ್ಲ. ಪ್ರಕರಣ ಸಂಬಂಧ ಯಾವುದೇ ಹೊಸ ದಾಖಲೆಗಳು ದೊರಕಿದರೂ ಆ ಕುರಿತಂತೆ ಮರು ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ವ್ಯಾಪಂ ಹಗರಣ ಪ್ರಕರಣವು ದೇಶದಾದ್ಯಂತ ಸುದ್ದಿ ಮಾಡುತ್ತಿದ್ದು, ಪ್ರಕರಣ ಸಂಬಂಧ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ವ್ಯಾಪಂ ಹಗರಣದಲ್ಲಿ ಭಾಗಿಯಾಗಿ ನಮ್ರತಾ ದಾಮೋರ್ ಎಂಬ ವಿದ್ಯಾರ್ಥಿನಿ 2009 ರಲ್ಲಿ ಮೆಡಿಕಲ್ ಸೀಟ್ ಪಡೆದುಕೊಂಡಿದ್ದಳು ಎಂದು ಹೇಳಲಾಗುತ್ತಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದ್ಯಾರ್ಥಿಯ ಶವ 2012 ರಲ್ಲಿ ಉಜ್ಜಯನಿಯ ರೈಲ್ವೆ ಟ್ರ್ಯಾಕ್ ಬಳಿ ಸಿಕ್ಕಿತ್ತು. ವ್ಯಾಪಂ ಹಗರಣದ ಸುತ್ತ ಹಲವು ಅನುಮಾನಗಳು ಸುತ್ತಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಸಾವನ್ನಪ್ಪಿದ್ದ ವಿದ್ಯಾರ್ಥಿನಿಯ ಪೋಷಕರನ್ನು ಸಂದರ್ಶನ ಮಾಡಲು ಪತ್ರಕರ್ತ ಅಕ್ಷಯ್ ಸಿಂಗ್ ಎಂಬುವವರು ಹೋಗಿದ್ದರು. ಆದರೆ ವರದಿ ವೇಳೆಯಲ್ಲಿ ಪತ್ರಕರ್ತ ಸಹ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.

Write A Comment