ಮಂಗಳೂರು : ನಿಮಾ೯ಣ ಹಂತದಲ್ಲಿರುವ ಕಟ್ಟಡದ ಮೇಲೆ ಮಳೆಯಿಂದಾಗಿ ಗುಡ್ಡ ಜರಿದು ಬಿದ್ದು ಮಣ್ಣಿನಡಿಯಲ್ಲಿ ಸಿಲುಕಿದ ಕಾರ್ಮಿಕರಲ್ಲಿ ಮೂವರು ಮೃತಪಟ್ಟು, ಇತರ ಮೂವರು ಕಾರ್ಮಿಕರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ಮಧ್ಯಾಹ್ನ ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಫರಂಗಿಪೇಟೆ ಜಂಕ್ಷನ್ ಬಳಿಯ ಜುಮಾದಿಗುಡ್ಡೆಯ ಪುದು ಪಂಚಾಯತ್ ಕಚೇರಿ ಬಳಿ ಸಂಭವಿಸಿದೆ. ಘಟನೆಯಲ್ಲಿ ಒರ್ವ ಕಾರ್ಮಿಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.
ಬಾಂಗ್ಲಾ ಮೂಲದ ನಿವಾಸಿಗಳಾದ ಮಿಲೋನ್ (20), ಮೇಮುನ್ (23), ಕೋರಿಕೋಮ್ (20) ಎಂಬವರು ಮೃತಪಟ್ಟ ಕಾರ್ಮಿಕರು. ಮಣ್ಣಿನಡಿಗೆ ಸಿಲುಕಿದ್ದ ಪಶ್ಚಿಮ ಬಂಗಾಲದ ಖುತುಬುದ್ಧೀನ್, ಬಿಹಾರದ ರಾಜು, ಜೀತೇಂದ್ರ ಎಂಬವರನ್ನು ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಮೇಲೆತ್ತಿದರು. ಅವರನ್ನು ಮಂಗಳೂರು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಾಗಿದೆ. ಶಬೀವುಲ್ಲ ಮಾತ್ರ ಯಾವುದೇ ಗಾಯಗಳಿಲ್ಲದೇ ಘಟನೆಯಿಂದ ಅದೃಷ್ಟದಿಂದ ಪಾರಾಗಿದ್ದಾನೆ.
ಪುದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಹಿಂಬದಿಯ ಜುಮಾದಿ ಗುಡ್ಡೆಯ ಬಳಿ, ಉದ್ಯಮಿ ಮುನೀರ್ ಎಂಬವರು 6 ತಿಂಗಳ ಹಿಂದೆಯಷ್ಟೇ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರು. ಕಟ್ಟಡದ ಹಿಂಬಾಗದ ಜುಮಾದಿ ಗುಡ್ಡದ ಮಣ್ಣು ಕುಸಿಯದಂತೆ ಉದ್ಯಮಿಗೆ ನಿರ್ದೇಶಿಸಲಾಗಿದೆ ಎಂದು ಪಂಚಾಯಿತಿ ಅಕಾರಿಗಳು ತಿಳಿಸಿದ್ದಾರೆ. ವಸತಿ ಸಮ್ಮುಚ್ಚಯ ನಿರ್ಮಾಣ ಸಂದರ್ಭ ಗುಡ್ಡದ ಜರಿಯದಂತೆ, ಯಾವುದೇ ತಡೆಗೋಡೆ ನಿರ್ಮಿಸಲಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ವಸತಿ ಸಮುಚ್ಛಯದ ಪಿಲ್ಲರ್ ನಿರ್ಮಾಣ ಕಾಮಗಾರಿ ಭಾಗಶಃ ಪೂರ್ಣಗೊಳಿಸಲಾಗಿದೆ. ಉಳಿದ ಕೆಲಸ-ಕಾರ್ಯಗಳು ನಡೆಯುತ್ತಿದ್ದು, ಮಂಗಳವಾರ ಬೆಳಗ್ಗೆಯಿಂದ ಸುಮಾರು 15 ಮಂದಿ ಕಾರ್ಮಿಕರು ಕಟ್ಟಡದಡಿಯಲ್ಲಿ ನಿಂತು ಕೆಲಸದಲ್ಲಿ ತಲ್ಲೀನರಾಗಿದ್ದರು. ಈ ಸಂದರ್ಭ ಸುಮಾರು 20 ಅಡಿ ಎತ್ತರದ ಗುಡ್ಡ ಕುಸಿಯಿತು. ಒಬ್ಬಾತ ಪಿಲ್ಲರ್‌ಗಳ ನೆರವಿನಿಂದ ಮೇಲೆ ಬಂದಿದ್ದು, ಆತನನ್ನು ಸ್ಥಳೀಯರು ರಕ್ಷಿಸಿದರು. ಜೆಸಿಬಿಯಿಂದ ಮಣ್ಣು ಅಗೆದು ಮೂವರನ್ನು ಮೇಲೆತ್ತಲಾಯಿತು. ಮೂವರು ಕಾರ್ಮಿಕರು ಮಾತ್ರ ಮಣ್ಣಿನಡಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ತಾಸುಗಟ್ಟಲೆ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿಗಳು, ಕಾರ್ಮಿಕರ ಮೃತದೇಹವನ್ನು ಹೊರ ತೆಗೆದರು.
ಸ್ಥಳಕ್ಕೆ ಮಂಗಳೂರು ಎಸ್ಪಿ ಡಾ.ಶರಣಪ್ಪ, ಎಎಸ್ಪಿ ರಾಹುಲ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಸಬ್ ಇನ್ಸ್‌ಪೆಕ್ಟರ್ ರಕ್ಷಿತ್ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್ ಘಟನಾ ಸ್ಥಳವನ್ನು ಅವಲೋಕಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ರೆವಿನ್ಯೂ ಇನ್ಸ್‌ಪೆಕ್ಟರ್ ನಾರಾಯಣ ಪೂಜಾರಿ, ಗ್ರಾಮ ಲೆಕ್ಕಾಕಾರಿಗಳಾದ ಪ್ರದೀಪ್, ರಾಜ್‌ಕುಮಾರ್, ತೌಫೀಕ್, ಸಿಬ್ಬಂದಿ ಸದಾನಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ರಕ್ಷಣಾ ಕಾರ್ಯದಲ್ಲಿ ನೆರವಾದರು.
ಗ್ರಾಪಂಗೆ ಗ್ರಾಮಸ್ಥರ ಮುತ್ತಿಗೆ
ಘಟನಾ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಈ ಸಂದರ್ಭ ಆಕ್ರೋಶಗೊಂಡ ಗ್ರಾಮಸ್ಥರು, ಪುದು ಗ್ರಾ.ಪಂ. ಕಾರ್ಯಾಲಯಕ್ಕೆ ದಿಢೀರ್ ಮುತ್ತಿಗೆ ಹಾಕಿದರು. ಗುಡ್ಡಕ್ಕೆ ತಡೆಗೋಡೆ ನಿರ್ಮಿಸದೆ ಕಟ್ಟಡ ಪರವಾನಿಗಿ ನೀಡಿದ್ದನ್ನು ಆರೋಪಿಸಿದ ಗ್ರಾಮಸ್ಥರು, ಕಾರ್ಮಿಕರ ಸಾವಿಗೆ ಆಡಳಿತ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂದಿದ್ದಾರೆ. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡುವಂತೆಯೂ ಆಗ್ರಹಿಸಿದರು.
ಜುಮಾದಿಗುಡ್ಡ ಕುಸಿಯುತ್ತಿರುವ ಬಗ್ಗೆ ಇತ್ತೀಚಿಗೆ ನಡೆದ ಗ್ರಾಮಸಭೆಯಲ್ಲೂ ಆಕ್ಷೇಪಿಸಿದ್ದನ್ನು ಸಂಬಂತರು ಲಕ್ಷ್ಯಿಸಿರುವುದಾಗಿ ಸ್ಥಳೀಯರಾದ ಬಶೀರ್, ಖಾದರ್, ಹಸನ್ ಮತ್ತಿತರು ಆರೋಪಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪ್ರವೇಶಿಸಿದ ಪೊಲೀಸ್ ಅಕಾರಿಗಳು, ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು, ಅಕಾರಿಗಳು ಹಾಗೂ ಜನಪ್ರತಿನಿಗಳೊಂದಿಗೆ ಸಮಾಲೋಚನೆ ನಡೆಸಿ, ವಿವಾದವನ್ನು ಬಗೆಹರಿಸಿದರು.