ಕರ್ನಾಟಕ

ಲಾಭದಾಯಕ ಗಣಿಗಳ ಪುನರಾರಂಭಕ್ಕೆ ಅನುಮತಿ : ಸಿಎಂ

Pinterest LinkedIn Tumblr

CM-Siddaramiaha-116120ಬೆಂಗಳೂರು,ಜು.14-ಹಟ್ಟಿ ಚಿನ್ನದ ಗಣಿ ಘಟಕ ವ್ಯಾಪ್ತಿಯ  ಚಿತ್ರದುರ್ಗ ಜಿಲ್ಲೆ ಹಿಂಗಳಹಾಳ ಗ್ರಾಮದ ಎರಡು ತಾಮ್ರದ ಗಣಿಗಳು ಹಾಗೂ ತುಮಕೂರು ಜಿಲ್ಲೆ ಅಚ್ಚನಹಳ್ಳಿ ಚಿನ್ನದ ಗಣಿಯನ್ನು ಸ್ಥಗಿತಗೊಳಿಸಲಾಗಿತ್ತು. ಒಂದು ವೇಳೆ  ಅವುಗಳು ಲಾಭದಾಯಕವಾಗಿದ್ದರೆ ಗಣಿಗಾರಿಕೆ ಮರುಪ್ರಾರಂಭಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.  ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ಗಣಿ ಮರುಸ್ಥಾಪನೆ ಬಗ್ಗೆ ಪ್ರಸ್ತಾವನೆ ಇಲ್ಲ. ಗಣಿ ಗುತ್ತಿಗೆ ಅವಶ್ಯವಿರುವ ಶಾಸನಬದ್ಧ ಅನುಮತಿ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಆರ್ಥಿಕವಾಗಿ ಲಾಭದಾಯಕ ಎಂದು ಕಂಡುಬಂದಲ್ಲಿ ಗಣಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.  1993-94ರಲ್ಲಿ ತಾಮ್ರದ ಗಣಿ ಸ್ಥಗಿತಗೊಂಡಿದ್ದರೆ, 2002ರಲ್ಲಿ ಚಿನ್ನದ ಗಣಿ ಸ್ಥಗಿತಗೊಂಡಿದೆ. ಗಣಿಯಲ್ಲಿ ಕೆಲಸ ಮಾಡುತ್ತಿದ್ದ 504 ಮಂದಿ  ಅಧಿಕಾರಿ ಮತ್ತು ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆಯಡಿ ಆರ್ಥಿಕ ನೆರವು ನೀಡಲಾಗಿದೆ  ಎಂದರು.

ಜೆಡಿಎಸ್‌ನ ಶಾರದಪುರ್ಯರ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಕೆ ಐಎಡಿಬಿ ಶಿವಮೊಗ್ಗ ಜಿಲ್ಲೆ ಶಿಗ್ಲಿಪುರ ಮತ್ತು ದೇವಕಾಡಕೊಪ್ಪ ಗ್ರಾಮಗಳಲ್ಲಿ 937 ಎಕರೆ ಜಮೀನಿನಲ್ಲಿ ಕೈಗಾರಿಕಾ ಪದೇಶ ಅಭಿವೃದ್ದಿಪಡಿಸಲು 2010ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಪೈಕಿ 362 ಎಕರೆ ಕಿರು ಅರಣ್ಯವೆಂದು ಹಾಗೂ 80 ಎಕರೆ ಪ್ರದೇಶದಲ್ಲಿ ಆಶ್ರಯ ಯೋಜನೆ ಮನೆ ನಿರ್ಮಿಸಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ  ಉಚಿತವಾಗಿ ಹಸ್ತಾಂತರಿಸಲು ಆದೇಶಿಸಿದರು.  ಉಳಿದ 494 ಎಕರೆ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ದಿಪಡಿಸುವ ಕಾಮಗಾರಿಗಳು ಅಭಿವೃದ್ದಿಯಲ್ಲಿವೆ ಎಂದು ಸ್ಪಷ್ಟಪಡಿಸಿದರು.

Write A Comment