ಕನ್ನಡ ವಾರ್ತೆಗಳು

ನಕ್ಸಲ್ ಬಾದಿತ ಪ್ರದೇಶಶಾಭಿವೃದ್ದಿ : ರೂ.3.78 ಕೋಟಿ ವೆಚ್ಚದಲ್ಲಿ 44 ಕಾಮಗಾರಿಗಳು ಪೂರ್ಣ

Pinterest LinkedIn Tumblr

DC_Census_Meet_2

ಮಂಗಳೂರು. ಜುಲೈ.15 : ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ಬಾದಿತ ಬಹುದೂರದ ಮತ್ತು ಒಳನಾಡಿನ ಪ್ರದೇಶಾಭಿವೃದ್ಧಿಗಾಗಿ 1.2 ಮತ್ತು 3 ನೇ ಹಂತದ ಕ್ರಿಯಾಯೋಜನೆಯಂತೆ ಒಟ್ಟು 45 ಕಾಮಗಾರಿಗಳು ಅನುಮೋದನೆಯಾಗಿದ್ದು, ಇದಕ್ಕೆ ರೂ.3.80ಕೋಟಿಗಳನ್ನು ನಿಗದಿಪಡಿಸಲಾಗಿತ್ತು, ಈ ಕಾಮಗಾರಿಗಳಲ್ಲಿ ಈಗಾಗಲೇ 44 ಕಾಮಗಾರಿಗಳನ್ನು ರೂ.3.78 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುದೂರದ ಮತ್ತು ಒಳನಾಡಿನ ಪ್ರದೇಶಾಭಿವೃದ್ಧಿ(ನಕ್ಷಲ್ ಬಾದಿತ ಪ್ರದೇಶಾಭಿವೃದ್ದಿ) ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐ.ಪಿ.ಶ್ರೀವಿದ್ಯಾ ಅವರು ತಿಳಿಸಿದರು.

ಶಿರ್ಲಾಲು ಗ್ರಾಮದ ಮಲೆಕ್ಕಿಲ ಮತ್ತು ಮಾಣಿಲ ರಸ್ತೆಯಲ್ಲಿ ರೂ.3,50 ಲಕ್ಷದಲ್ಲಿ ಎರಡು ಮೋರಿ ರಚನೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಬಿಲ್ಲು ಪಾವತಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದೆ, ಇದೇ ಗ್ರಾಮದ ಶಿರ್ಲಾಲು ಮತ್ತು ಮಲೆಕ್ಕಿಲ ಮಧ್ಯೆ ಸುಡೆಲಾಯಿ ಎಂಬಲ್ಲಿ ರೂ.77.5೦ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇದಕ್ಕಾಗಿ ರೂ.43.66 ಲಕ್ಷಗಳು ಬಿಡುಗಡೆಗೊಂಡಿದ್ದು ಉಳಿದ ರೂ.33.85 ಲಕ್ಷ ಪಾವತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಮಿತ್ತಬಾಗಿಲು ಕಲ್ಸಾರು ಪ್ರದೇಶವನ್ನು ಸಂಪರ್ಕಿಸುವ ಮಿತ್ತಬಾಗಿಲು ಗ್ರಾಮದ ಎಲುವೇರೆ ಹಳ್ಳ ಎಂಬಲ್ಲಿ ಸಣ್ಣ ಸೇತುವೆ ನಿರ್ಮಾಣವನ್ನು ರೂ.6.70ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ,

ನಡ ಗ್ರಾಮದ ಕಂಬುಜೆ ಬಳಿ ನಾಲ್ಕು ಮೋರಿಗಳನ್ನು ರೂ.8.75 ಲಕ್ಷದಲ್ಲಿ ಕೈಗೊಂಡಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ, ಮಿತ್ತಬಾಗಿಲು ಗ್ರಾಮದ ಬೊಳ್ಳಾಜೆ ಎಂಬಲ್ಲಿ ರಸ್ತೆಗೆ ರೂ.28.೦೦ಲಕ್ಷಗಳ ವೆಚ್ಚದಲ್ಲಿ ಕಿರು ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದು, ಇದರ ಬಾಬ್ತು ರೂ.11.೦೦ಲಕ್ಷಗಳನ್ನು ಪಾವತಿಸಲಾಗಿದೆ, ನಾವೂರು ಗ್ರಾಮದ ನಾವೂರು ಸರ್ಕಾರಿ ಪ್ರೌಡಶಾಲೆಗೆ ರೂ.9.9೦ಲಕ್ಷದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು ಇದಕ್ಕೆ ರೂ. 8.384ಲಕ್ಷಗಳನ್ನು ಪಾವತಿಸಲಾಗಿದೆ, ಮಲವಂತಿಗೆ ಗ್ರಾಮದ ಎಳನೀರು ಎಂಬಲ್ಲಿ ರೂ.8.15ಲಕ್ಷದಲ್ಲಿ ಉಪ ಆರೋಗ್ಯ ಕೇಂದ್ರ ಕಟ್ಟಡವನ್ನು ನಿರ್ಮಿಸಿದ್ದು ರೂ.4.104ಲಕ್ಷ ಬಿಡುಗಡೆಗೊಂಡಿದೆ, ಸವಣಾಲು ಗ್ರಾಮದ ಸವಣಾಲು ಹೇಟ್ಲೋಟ್ಟು-ಬಸದಿ ರಸ್ತೆ 1.5೦ಕಿ.ಮಿ.ದೂರ ಡಾಮರೀಕರಣವನ್ನು ರೂ.30.೦೦ಲಕ್ಷದಲ್ಲಿ ಪೂರ್ಣಗೊಳಿಸಲಾಗಿದೆ, ಶಿರ್ಲಾಲು ಗ್ರಾಮದ ಬೈರವ ಗುಂಡಿಯಿಂದ ಮಲೆಕ್ಕಿಲ ರಸ್ತೆಗೆ ಕೆಮ್ಮಡೆ ಎಂಬಲ್ಲಿ ಕಿರು ಸೇತುವೆ ಮತ್ತು ರಸ್ತೆ ದುರಸ್ತಿಯನ್ನು ರೂ. 25.೦೦ಲಕ್ಷದಲ್ಲಿ ಪೂರ್ಣಗೊಳಿಸಲಾಗಿದೆ,ಶಿರ್ಲಾಲು ಗ್ರಾಮದ ಬೈಲಡ್ಕ-ಸವಣಾಲು-ಕರಂಬಾರು ರಸ್ತೆಯ ಸವಣಾಲು-ಕರಂಬಾರು ಮಧ್ಯೆ 2 ಕಿ.ಮೀ.ವರೆಗೆ ರೂ.20.೦೦ಲಕ್ಷದಲ್ಲಿ ರಸ್ತೆ ದುರಸ್ತಿ ಮಾಡಲಾಗಿದೆ, ಇದಲ್ಲದೆ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ನಕ್ಸಲ್ ಪ್ರದೇಶದ ಜನರಿಗೆ ಸಾಮಾನ್ಯ ಜೀವನ ನಿರ್ವಹಣೆಗೆ ಜಿಲ್ಲಾ ಪಂಚಾಯತ್ ವತಿಯಿಂದ ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಆರ್.ಉಮೇಶ್ ಅವರು ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ||ಶರಣಪ್ಪ ಅವರು ನಕ್ಸಲ್ ಬಾದಿತ ಪ್ರದೇಶಗಳ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅಲ್ಲಿಯ ಜನರಲ್ಲಿ ವಿಶ್ವಾಸ ಮೂಡಿಸುತ್ತಿರುವುದು ಶ್ಲಾಘನೀಯವಾಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಅವರಲ್ಲಿ ವಿಶ್ವಾಸ ಮೂಡಿಸುವ ವಾತಾವರಣ ಉಂಟುಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

Write A Comment