ಕನ್ನಡ ವಾರ್ತೆಗಳು

20ನೇ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರಿಂದ ಲಾಂಛನ‌ ಆಹ್ವಾನ

Pinterest LinkedIn Tumblr

pradeep_kumar_kalkura

ಮಂಗಳೂರು,ಜುಲೈ.16 : ಶ್ರೀ ಕ್ಷೇತ್ರ ಕಟೀಲಿನ ಪ್ರಾಂಗಣದಲ್ಲಿ 2015 ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಜರಗಲಿರುವ 20 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರಿಂದ ಸೂಕ್ತ ಲಾಂಛನವನ್ನು‌ಆಹ್ವಾನಿಸಲಾಗಿದೆ.

ಕನ್ನಡ ನಾಡು ನುಡಿಯ ಸಾಂಸ್ಕೃತಿಕ‌ ಉತ್ಸವಕ್ಕೆ ಸರಿ ಹೊಂದುವ ‘ಲಾಂಛನವನ್ನು ರಚಿಸಿ, ಸ್ವವಿಳಾಸ, ದೂರವಾಣಿ ಸಂಖ್ಯೆ ಸಹಿತ ಜುಲೈ 28  ರೊಳಗಾಗಿ ಅಧ್ಯಕ್ಷರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಾಗಾಂಧಿ ರಸ್ತೆ, ಕೊಡಿಯಾಲ್‌ಬೈಲ್ ಮಂಗಳೂರು ಇಲ್ಲಿಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಆಯ್ಕೆಗೊಂಡ ‘ಲಾಂಛನ’ ರಚನ ಕಾರರನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಪುರಸ್ಕರಿಸಲಾಗುವುದು ‌ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು‌ ಅಧ್ಯಕ್ಷ‌ ಎಸ್. ಪ್ರದೀಪಕುಮಾರಕಲ್ಕೂರ ತಿಳಿಸಿದ್ದಾರೆ.

Write A Comment