ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ ರಜಾ ದಿನಕ್ಕೆ ಮಳೆರಾಯ ಅಡ್ಡಿ, ಆರ್ಭಟ |ತಾಲೂಕಿನ ಹಲವೆಡೆ ಜನಜೀವನ ಅಸ್ಥವ್ಯಸ್ಥ (updated pics)

Pinterest LinkedIn Tumblr

ಕುಂದಾಪುರ: ಕುಂದಾಪುರದ ಹಲವೆಡೆ ಶನಿವಾರದಿಂದ ಆರಂಭಗೊಂಡ ಮಳೆ ವಾರದ ರಜಾ ದಿನ ರವಿವಾರವೂ ಮುಂದುವರಿದಿದ್ದು ರಜಾ ದಿನದ ಮಜಾ ಸವಿಯಲು ಹವಣಿಸುತ್ತಿದ್ದವರ ಆಸೆಗೆ ತಣ್ಣೀರು ಎರಚಿದಂತಾತ್ತು. ಹಲವೆಡೆ ಗಾಳಿ ಹಾಗೂ ಭಾರೀ ಮಳೆಯಿಂದ ಕೃತಕ ನೆರೆ ಸೃಷ್ಟಿಯಾಗಿದ್ದಲ್ಲದೇ, ಮರಗಳು ಧರಾಶಾಹಿಯಾಗಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡ ಘಟನೆಗಳು ನಡೆದಿದೆ.

ಶುಕ್ರವಾರದಿಂದ ಮೊದಲುಗೊಂಡು ಶನಿವಾರವಿಡೀ ಸುರಿದ ಭಾರೀ ಮಳೆ ಭಾನುವಾರವೂ ಮುಂದುವರಿದು ಬೆಳಿಗ್ಗೆನಿಂದಲೂ ಬಿರುಸುಗೊಂಡ ಮಳೆ ಸಂಜೆಯವರೆಗೂ ಏಕಾ‌ಏಕಿ ಸುರಿಯುತ್ತಿದ್ದ ಕಾರಣ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದವರಿಗೂ ಕೊಂಚ ಹಿನ್ನಡೆಯಾಗಿತ್ತು.

Kndpr_rain_Problm (13) Kndpr_rain_Problm (9) Kndpr_rain_Problm (10) Kndpr_rain_Problm (7) Kndpr_rain_Problm Kndpr_rain_Problm (2) Kndpr_rain_Problm (4) Kndpr_rain_Problm (1) Kndpr_rain_Problm (5) Kndpr_rain_Problm (8) Kndpr_rain_Problm (11) Kndpr_rain_Problm (12) Kndpr_rain_Problm (15) Kndpr_rain_Problm (19) Kndpr_rain_Problm (16) Kndpr_rain_Problm (18) Kndpr_rain_Problm (17) Kndpr_rain_Problm (22) Kndpr_rain_Problm (21) Kndpr_rain_Problm (20) Kndpr_rain_Problm (3) Kndpr_rain_Problm (6) Kndpr_rain_Problm (14)

Rain_Prblm_Kndpr (4) Rain_Prblm_Kndpr (7) Rain_Prblm_Kndpr (2) Rain_Prblm_Kndpr (3) Rain_Prblm_Kndpr (1) Rain_Prblm_Kndpr Rain_Prblm_Kndpr (6)

ಆಜ್ರಿಯಲ್ಲಿ ರಸ್ತೆಗುರುಳಿದ ಬೃಹತ್ ಮರಗಳು:
ಬಾರೀ ಗಾಳಿ ಹಾಗೂ ಸುರಿದ ಬಾರೀ ಮಳೆಯಿಂದಾಗಿ ತಾಲೂಕಿನ ಆಜ್ರಿ ಸಮೀಪದ ಹೊಳಂದೂರು ಎಂಬಲ್ಲಿ ಎರಡು ಬ್ರಹತ್ ಮರಗಳು ರಸ್ತೆಗೆ ಅಡ್ದವಾಗಿ ಬಿದ್ದ ಪರಿಣಾಮ ಸಂಚಾರ ಅಸ್ಥವ್ಯಸ್ಥಗೊಂಡು ಜನರು ಪರದಾಡುವಂತಾಗಿದೆ.

ಆಜ್ರಿ ಗ್ರಾಮಪಂಚಾಯತ್ ವ್ಯಾಪ್ತಿಯ ಹೊಳಂದೂರು ಸಮೀಪ  ಬ್ರಹತ್ ಗಾತ್ರದ ಎರಡು ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಇದನ್ನು ತೆರವುಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಿಲ್ಲ, ಮರಗಳನ್ನು ತೆರವುಗೊಳಿಸಲು ಸ್ಥಳಿಯರಿಗೂ ಇಲಾಖೆ ಬಿಟ್ಟಿಲ್ಲ ಎಂದು ಸ್ಥಳಿಯರು ತಿಳಿಸಿದ್ದಾರೆ.  ಈ ಭಾಗದಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥಗೊಂದಿದೆ. ಸಿದ್ದಾಪುರದಿಂದ ನೇರಳಕಟ್ಟೆ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಈ ಭಾಗದ ಜನರು ಕುಂದಾಪುರ ನಗರ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಈ ಕಾರಣದಿಂದಾಗಿ ಹಲವಾರು ಪ್ರಯಾಣಿಕರು ಹಾಗೂ ವಾಹನ ಸವಾರರು ಸಂಕಟಪಡುವಂತಾಗಿದೆ. ಅಲ್ಲದೇ ಪರ್‍ಯಾಯ ರಸ್ತೆಗಾಗಿ ಹಲವು ಕಿಲೋಮೀಟರ್ ಸುತ್ತುಹಾಕಿ ಹೋಗಬೇಕಾದ ಅನಿವಾರ್ತೆಯೂ ಇದೆ. ಭಾನುವಾರ ಮಧ್ಯಾಹ್ನದವರೆಗೂ ಮರಗಳ ತೆರವು ಕಾರ್ಯ ನಡೆದಿಲ್ಲ, ಸ್ಥಳದಲ್ಲಿ ಬಸ್ಸು ಸಂಚಾರವೂ ಇಲ್ಲದೇ ಸಮಸ್ಯೆಯಾಗಿದೆ.

ಇನ್ನು ದ್ವಿಚಕ್ರ ವಾಹನ ಸವಾರರು ಕೆಲವರ ಸಹಾಯದಿಂದ ತಮ್ಮ ವಾಹನ ಎತ್ತಿ ಕೊಂಡುಯ್ಯುತ್ತಿದ್ದು, ಇಲಾಖೆ ಹಾಗೂ ಸಂಬಂದಪಟ್ತವರ ಬೇಜವಬ್ದಾರಿ ವರ್ತನೆಗೆ ನಾಗರೀಕರು ಹಿಡಿಶಾಪ ಹಾಕುತ್ತಿದ್ದಾರೆ.

ತಾಲೂಕಿನ ಹಲವೆಡೆ ಕೃತಕ ನೆರೆ ಸೃಷ್ಟಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಹಾಗೂ ಚರಂಡಿ ತೆರವುಗೊಳಿಸಿದ್ದ ಕಾರಣದಿಂದಾಗಿ ಕುಂದಾಪುರ ನಗರ, ಕುಂಭಾಸಿ, ಬೀಜಾಡಿ, ಕೋಟ, ಸಾಲಿಗ್ರಾಮ, ತೆಕ್ಕಟ್ಟೆ, ಕೋಟೇಶ್ವರ, ಕುಂದಾಪುರದ ಹಂಗಳೂರು, ಗಾಂಧಿ ಮೈದಾನದ ಎದುರು ಪ್ರದೇಶಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿ ಹಾಗೂ ರಸ್ತೆ ಮೇಲೆಯೆ ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು.

ಗದ್ದೆಯಲ್ಲಿ ನೀರು- ಭತ್ತದ ಸಸಿ ಕೊಳೆಯುವ ಭೀತಿ: ಮಳೆಯಿಲ್ಲದ ಈ ಮಳೆಗಾಲದ ವರ್ಷದಲ್ಲಿ ಅತಿಥಿಯಂತೆ ಆಗಮಿಸಿದ ಮಳೆರಾಯನ ಆಗಮನದಿಂದ ಸಂತಸದಲ್ಲಿದ್ದ ರೈತನಿಗೆ ಭಾನುವಾರ ಸುರಿದ ಮಳೆ ಕೊಂಚ ಆತಂಕವನ್ನೇ ಉಂಟುಮಾಡಿದೆ. ಶುಕ್ರವಾರ ಹಾಗೂ ಶನಿವಾರದಿಂದ ಸುರಿದ ಬಾರೀ ಮಳೆಯ ಕಾರಣ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಏಕಾ‌ಏಕಿ ಸುರಿಯುತ್ತಿರುವ ಮಳೆಯಿಂದ ನಾಟಿ ಮಾಡಿದ ಭತ್ತದ ಸಸಿಗಳು ಕೊಳೆಯುವ ಭೀತಿ ಎದುರಾಗಿದೆ.

Write A Comment