ಪಾಠ ಮಾಡುತ್ತಲೇ ಇಹಲೋಕ ತ್ಯಜಿಸಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ದೈತ್ಯ ಕಂಪನಿ ಗೂಗಲ್ ವಿಶಿಷ್ಟ ರೀತಿಯಲ್ಲಿ ಸಂತಾಪ ಸೂಚಿಸಿದೆ.
ತನ್ನ ಹೋಂ ಪೇಜ್ ನಲ್ಲಿ ವಿಶಿಷ್ಟ ಡೂಡಲ್ ರೂಪಿಸಿರುವ ಗೂಗಲ್ ಸರ್ಚ್ ಭಾಕ್ಸ್ ಕೆಳಗಡೆ ಕಪ್ಪು ಬಣ್ಣದ ರಿಬ್ಬನ್ ಹಾಕಿದ್ದು ಮೌಸ್ ಕ್ಲಿಕ್ ಮಾಡಿದ ತಕ್ಷಣ ‘ಇನ್ ಮೆಮೊರಿ ಆಫ್ ಎಪಿಜೆ ಅಬ್ದುಲ್ ಕಲಾಂ’ ಎಂಬ ವಾಕ್ಯ ಬರುವಂತೆ ಮಾಡಿದ್ದು ಆ ಮೂಲಕ ಜಗತ್ತು ಕಂಡ ನಾಯಕನಿಗೆ ತನ್ನ ಶ್ರದ್ದಾಂಜಲಿ ಸಲ್ಲಿಸಿದೆ.
ಈ ನಡುವೆ ಕಲಾಂ ಅವರ ಅಂತ್ಯಕ್ರಿಯೆ ರಾಮೇಶ್ವರಂ ನಲ್ಲಿ ನಡೆಯಲಿದ್ದು ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.