ರಾಷ್ಟ್ರೀಯ

ಬೀದಿ ನಾಯಿಗಳ ಹಾವಳಿ ತಪ್ಪಿಸಲು ಈತ ನೀಡಿದ ಸಲಹೆ ಏನು ಗೊತ್ತಾ..?

Pinterest LinkedIn Tumblr

dogಕೇರಳ: ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡುವುದನ್ನು ಹಲವಾರು ಬಾರಿ ಕೇಳಿದ್ದೇವೆ. ಅಲ್ಲದೇ ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡಿದಾಗ ಅವರು ಸಾವಿಗೀಡಾದ ಘಟನೆಯೂ ನಡೆದಿದೆ. ಈಗ ಕೇರಳದ ಗ್ರಾ.ಪಂ. ಅಧ್ಯಕ್ಷರೊಬ್ಬರು ಇದಕ್ಕೆ ಪರಿಹಾರ ಸೂಚಿಸಿದ್ದಾರೆ. ಅದೇನೂ ಅಂತೀರಾ ಈ ಸುದ್ದಿ ಓದಿ.

ಗುರುವಾರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿನ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ಸಭೆ ನಡೆದಿತ್ತು. ಅಲ್ಲಿ ಮಾತನಾಡಿದ ಎಡಕಾಟ್ಟುವಾಯಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಕುಮಾರ್, ನಾಯಿಗಳಿಗೆ ದಕ್ಷಿಣ ಕೊರಿಯಾ ಹಾಗೂ ಚೀನಾದಲ್ಲಿ ಆಪಾರ ಬೇಡಿಕೆಯಿದೆ. ಈ ಎರಡು ದೇಶಗಳ ಜನ ನಾಯಿ ಮಾಂಸ ಭಕ್ಷಣೆ ಮಾಡುವ ಕಾರಣ ನಾಯಿ ಮಾಂಸವನ್ನು ರಫ್ತು ಮಾಡೋಣ ಎಂದಿದ್ದಾರೆ.

ಇದರಿಂದ ದೇಶಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಬೀದಿ ನಾಯಿಗಳ ಕಾಟವೂ ತಪ್ಪಿದಂತಾಗುತ್ತದೆ ಎಂದಿರುವ ಅವರು, ಈ ಉದ್ಯಮ ಬೆಳೆದರೆ ನಾಯಿ ಸಾಕಣೆ ಫಾರ್ಮ್ ಗಳೂ ಆರಂಭವಾಗಬಹುದೆಂದು ಹೇಳಿದ್ದಾರೆ. ಇವರ ಸಲಹೆಯನ್ನು ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಅನುಮೋದಿಸಿದ್ದಾರೆ. ಸರ್ಕಾರಕ್ಕೆ ಈ ಪ್ರಸ್ತಾವನೆಯನ್ನು ಕಳುಹಿಸುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ. ಆದರೆ ಇದಕ್ಕೆ ಪ್ರಾಣಿ ದಯಾ ಸಂಘದವರು ಏನು ಹೇಳುತ್ತಾರೋ ಕಾದು ನೋಡಬೇಕಿದೆ.

2014- 15 ರಲ್ಲಿ ಕೇರಳದ 1.06 ಲಕ್ಷ ಮಂದಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪರಿಹಾರ ಕಂಡು ಹಿಡಿಯುವಂತೆ ಕೇರಳ ಮುಖ್ಯಮಂತ್ರಿ ಓಮನ್ ಚಾಂಡಿ ಹೇಳಿದ್ದು, ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ತಮ್ಮ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲು ಸಜ್ಜಾಗಿದ್ದಾರೆ.

Write A Comment