ಕನ್ನಡ ವಾರ್ತೆಗಳು

ಸಿದ್ದಾಪುರ: ಶಿಕ್ಷಕಿಯೊಂದಿಗೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ: ಆರೋಪಿ ಬಂಧನ

Pinterest LinkedIn Tumblr

4496rape

ಕುಂದಾಪುರ: ಬಸ್‌ಗಾಗಿ ಕಾಯುತ್ತಿದ್ದ ಶಿಕ್ಷಕಿಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸಿದ್ದಾಪುರದ ಬಸ್ಸು ನಿಲ್ದಾಣದಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಳ್ಳೂರು-74ನೇ ಗ್ರಾಮದ ತೆಂಕೂರು ನಿವಾಸಿ ಉಮೇಶ್ ಬೋವಿ (26)  ಬಂಧಿತ ಆರೋಪಿ.

ಘಟನೆ ಹಿನ್ನಲೆ:  ಉಮೇಶ್ ಬೋವಿ ಹಲವಾರು ದಿನಗಳಿಂದ ಶಿಕ್ಷಕಿಯನ್ನು ಹಿಂಬಾಲಿಸುತ್ತಿದ್ದು, ಬುಧವಾರ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿ,ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನು ಗಮನಿಸುತ್ತಿದ್ದ ಸ್ಥಳೀಯ ಯುವಕರು ಹಾಗೂ ಪ್ರಯಾಣಿಕರು ಆರೋಪಿಯನ್ನು ಹಿಡಿದು, ಶಂಕರನಾರಾಯಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿ ಉಮೇಶ್ ಬೋವಿಗೆ ಆ. 12ರ ತನಕ ನ್ಯಾಯಾಂಗ ಬಂಧನ ನೀಡಿದೆ.

Write A Comment