ಮಂಗಳೂರು,ಅಗಸ್ಟ್.01 : ಎ.ಬಿ. ಶೆಟ್ಟಿ ಮೆಮೋರಿಯಲ್ ದಂತ ವಿಜ್ಞಾನ ಸಂಸ್ಥೆವತಿಯಿಂದ ಅಖಿಲ ಭಾರತ ಅಂತರ್ದಂತ ಕಾಲೇಜುಗಳ ಪ್ರದರ್ಶನ ಸ್ಪರ್ಧೆಯನ್ನು ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ನಡೆಯಿತು.
ಆ.1 ಮತ್ತು 2 ಈ ಎರಡು ದಿನಗಳ ದಂತ ಆರೋಗ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಅಖಿಲ ಭಾರತ ಅಂತರ್ ದಂತ ತನ್ನ ಪ್ರಥಮ ಸಮುದಾಯ ಆಧಾರಿತ ಕಾರ್ಯಕ್ರಮ ‘ಡ್ಯಾಝೆಲ್ 30″ ಕಾಲೇಜುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಮಂಗಳೂರು, ಕಲ್ಲಿಕೋಟೆ, ಮೈಸೂರು ಮೊದಲಾದ ಕಡೆಗಳಿಂದ 10ಕ್ಕೂ ಅಧಿಕ ಕಾಲೇಜುಗಳು ಸ್ಪರ್ಧೆಗಳು ಭಾಗವಹಿಸಿದ್ದರು.
ಹಲ್ಲಿನ ಆರೋಗ್ಯ ಮತ್ತು ರಕ್ಷಣೆಯ ಕುರಿತು ಜನಸಾಮಾನ್ಯರಿಗೆ ಮಾಹಿತಿ ಹಾಗೂ ಜಾಗೃತಿಯನ್ನು ನೀಡುವ ಮಾದರಿಗಳನ್ನು ಕಾಲೇಜುಗಳು ವಿಧ್ಯಾರ್ಥಿಗಳು ಪ್ರದರ್ಶಿಸಿಸಿದರು.