ಅಂತರಾಷ್ಟ್ರೀಯ

ವೈಮಾನಿಕ ದಾಳಿಯಲ್ಲಿ ಇಸೀಸ್ ನ 14 ವರ್ಷದ ಉಗ್ರನ ಹತ್ಯೆ: ಇರಾಕ್ ಗೂಢಚಾರಿಯನ್ನು ಕೊಂದಿದ್ದ ಬಾಲ ಭಯೋತ್ಪಾದಕ

Pinterest LinkedIn Tumblr

ISISಲಂಡನ್: ಇತ್ತೀಚೆಗಷ್ಟೇ ಗೂಢಚಾರಿಯನ್ನು ಕೊಂದಿದ್ದ ಇಸೀಸ್ ನ 14 ವರ್ಷದ ಬಾಲ  ಉಗ್ರಗಾಮಿಯನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ.

ಎಸ್ಐಟಿಇ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ 14 ವರ್ಷದ ಉಗ್ರನನ್ನು ಅಬು ಓಮರ್ ಕವಾಕ್ಜ್ ನನ್ನು ವೈಮಾನಿಕ ದಾಳಿಯಲ್ಲಿ ಸಾಯಿಸಲಾಗಿದೆ ಎಂದು ಜಿಹಾದಿಗಳು ಹೇಳಿದ್ದಾರೆ. ಮೇ.ನಲ್ಲಿ ಬಿಡುಗಡೆಯಾದ ಇಸೀಸ್ ವಿಡಿಯೋದಲ್ಲಿ ಈ 14 ವರ್ಷದ ಬಾಲಕ ಇರಾಕ್ ನ ಗೂಢಚಾರಿಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಆದರೆ ಆ ವಿಡಿಯೋ ನಂತರ ಗೂಢಚಾರಿಯನ್ನು ಹತ್ಯೆ ಮಾಡಿದ ಬಾಲ ಉಗ್ರವಾದಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇರಾಕ್ ಗೂಢಚಾರಿಯ ಪಕ್ಕದಲ್ಲಿ ಪಿಸ್ತೂಲನ್ನು ಹಿಡಿದು ನಿಂತಿದ್ದು ಇದೆ 14 ವರ್ಷದ ಬಾಲಕನಾದರೂ ಕೊಲೆ ಮಾಡಿದ್ದು ಮಾತ್ರ ಬೇರೆಯ ಜಿಹಾದಿಗಳು ಎಂಬ ವಾದವೂ ಕೇಳಿಬರುತ್ತಿದೆ. ಐಸಿಸ್ ನ ಖ್ಯಾತ ಶಿರಚ್ಛೇಧಕ ಜಿಹಾದಿ ಜಾನ್ ನಂತೆಯೇ ಮುಂದಿನ ಪೀಳಿಗೆಯನ್ನು ತಯಾರು ಮಾಡುತ್ತಿದ್ದೇವೆ ಎಂಬ ಸಂದೇಶವನ್ನು ಕಳಿಸಲು 14 ವರ್ಷ ಬಾಲಕ ಹತ್ಯೆ ಮಾಡುತ್ತಿರುವ ವಿಡಿಯೋವನ್ನು ಇಸೀಸ್ ತಯಾರಿಸಿತ್ತು ಎಂದು ಹೇಳಲಾಗಿದೆ. ಆದರೆ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ 14 ವರ್ಷದ ಬಾಲಕನನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ.

Write A Comment