ವಯಸ್ಸಾದ ಮೇಲೆ ಮೂಲೆ ಸೇರುವವರೇ ಜಾಸ್ತಿ. ಇಂತಹವರ ನಡುವೆ ಅಜ್ಜನೊಬ್ವ ವಿಭಿನ್ನವಾಗಿ ವರ್ತಿಸಿ ಗಮನ ಸೆಳೆದಿದ್ದಾನೆ. ಆತ ಮಾಡಿದ್ದು ಸಾಮಾನ್ಯ ಕೆಲಸವಲ್ಲ, ಬರೋಬ್ಬರಿ 240 ಕಿ.ಮೀ. ವೇಗದಲ್ಲಿ ಕಾರು ಚಾಲನೆ ಮಾಡಿ ಈ ಅಜ್ಜ ಸುದ್ಧಿ ಮಾಡಿದ್ದಾನೆ.
ಅಂದ ಹಾಗೆ ಈತನಿಗೆ 71 ವರ್ಷ ವಯಸ್ಸು. ಜರ್ಮನಿಯ ಈ ತಾತ 240 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿದ್ದಾರೆ. ಈತನ ವೇಗಕ್ಕೆ ಇನ್ನೇನಾಗಲು ಸಾಧ್ಯ. ನಿಮ್ಮ ಊಹೆಯಂತೆ ಈತ ಚಲಾಯಿಸುತ್ತಿದ್ದ ಮೆಕ್ ಲ್ಯಾರನ್ 12 ಸಿ ಸೂಪರ್ ಕಾರು ಅಪಘಾತಕ್ಕೀಡಾಗಿದೆ.
ವಿಶೇಷವೆಂದರೆ ಕಾರು ಹಾಳಾದರು ಅಜ್ಜನಿಗೆ ಮಾತ್ರ ಏನೂ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಅಪಘಾತಕ್ಕೀಡಾದ ಕಾರಿನಿಂದ ಸ್ಟೈಲಾಗಿ ಇಳಿದ ವೃದ್ದ ಆತಂಕದಿಂದ ನೋಡುತ್ತಿದ್ದರಿಗೆ ವಿಷ್ ಮಾಡಿದ್ದಾನೆ. ಅದೃಷ್ಟವೆಂದರೆ ಇದೇ ಅಲ್ಲವೇ..!