ಬೆಂಗಳೂರು,ಆ.5-ಸ್ವಾಂತ್ರೋತ್ಸವ ಪ್ರಯುಕ್ತ ವಿಶ್ವವಿಖ್ಯಾತ ಲಾಲ್‌ಬಾಗ್‌ನಲ್ಲಿ ಆ.7ರಿಂದ 16ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದು, ಮೈಸೂರಿನ ರಾಣಿ ಪ್ರಮೋದಾ ದೇವಿ ಒಡೆಯರ್ ಹಾಗೂ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ ಎಂದು ಮೈಸೂರು ಉದ್ಯಾನ ಕಲಾ ಸಂಘದ ಅಧ್ಯಕ್ಷರು , ತೋಟಗಾರಿಕೆ ನಿರ್ದೇಶಕ(ಪ್ರಭಾರ)ರಾದ ಎಚ್.ಎಸ್.ಶಿವಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನ ಪ್ರಸಿದ್ಧ ಅರಮನೆಯನ್ನು ಸಂಪೂರ್ಣ ಹೂವಿನಿಂದಲೇ ನಿರ್ಮಿಸಿರುವುದು ಈ ಬಾರಿಯ ವಿಶೇಷವಾಗಿದೆ ಎಂದು ಹೇಳಿದರು. ಇದರ ಜತೆಗೆ ಮೈಸೂರನ್ನು ಆಳಿದ ಐವರು ಒಡೆಯರ್ ಅವರ ಪ್ರತಿಮೆಗಳನ್ನು ಹೂವಿನಿಂದ ನಿರ್ಮಿಸಲಾಗುತ್ತಿದೆ, ಜೊತೆಗೆ ಇತ್ತೀಚೆಗೆ ನಿಧನರಾದ ಖ್ಯಾತ ವಿಜ್ಞಾನಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ಮರಳಿನಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ.