ಮಂಗಳೂರು,ಆಗಸ್ಟ್.05 : ರೊಜರಿ ವಿದ್ಯಾಸಂಸ್ಥೆಯಲ್ಲಿ, ಸುಸಜ್ಜಿತವಾದ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಕೊಠಡಿಗಳು, ಹಾಗೂ ಮಕ್ಕಳಿಗೆ ಆಡುವ ಒಳ ಅಂಗಳ, ದೃಶ್ಯ ಮಧ್ಯಮ ಕೊಠಡಿ ಹಾಗೂ ಕಂಪ್ಯೂಟರ್ ಕೇಂದ್ರ, ಹೊಸ ಕೇಂದ್ರವು ಇದೇ ಬುಧವಾರದಂದು ಉದ್ಘಾಟನೆಗೊಂಡಿತ್ತು.
ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಅತೀ ವಂದನೀಯ ಡೆನಿಸ್ ಮೊರಸ್ ಪ್ರಭುರವರು ಆಶೀರ್ವಾಚನ ಮಾಡಿದರು. ವಂ. ಜೆರೆಲ್ಡಾ ಡಿ’ಸೋಜ ಕಾರ್ಯದರ್ಶಿ, ಕಥೊಲಿಕ ವಿದ್ಯಾ ಮಂಡಳಿ ಮಂಗಳೂರು, ಹಾಗೂ ಶ್ರೀ ಸಚಿನ್ ಲಾರೆನ್ಸ್, ಪೋಲಿಸ್ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದರು.
ಸುಸಜ್ಜಿತ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಕೊಠಡಿಗಳನ್ನು ಶ್ರೀ ಸಚಿನ್ ಲಾರೆನ್ಸ್, ಹೊಸ ಕಂಪ್ಯೂಟರ್ ಕೇಂದ್ರವು ಮೊನ್ಸಿಚೊರ್ ಡೆನಿಸ್ ಮೊರಸ್ ಪ್ರಭು, ಹೊಸ ದೃಶ್ಯ ಮಾಧ್ಯಮ ಕೊಠಡಿಯನ್ನು ವಂ. ಜೆರೆಲ್ಡಾ ಡಿ’ಸೋಜರವರು ಉದ್ಘಾಟನೆ ಮಾಡಿದರು.
ಮಕ್ಕಳಾಗಿ ಎಳೆಯರಿರುವಾಗ ನಾವು ಗಮನವನ್ನು ಕೊಡಬೇಕು. ಮೌಲ್ಯಗಳನ್ನು ನಾವು ಬೋದಿಸಬೇಕು. ನಾವು ಮಕ್ಕಳ ಹೆತ್ತವರಿಗೆ ನಾವು ಆದರ್ಶರಾಗಬೇಕು, ಎಂದು ಶ್ರೀ ಸಚಿನ್ ಲಾರೆನ್ಸ್‌ರವರು ಹಿತ ನುಡಿದರು. ಇಂದಿನ ಮಕ್ಕಳಿಗೆ, ಅತ್ಯಾಧುನಿಕ ರೀತಿಯಲ್ಲಿ ಶಿಕ್ಷಣವನ್ನು ನೀಡಿದರೆ ಮಕ್ಕಳು ಅಗತ್ಯಗಳನ್ನು ನೀಗಿಸಲು ಸಾಧ್ಯಾವಾಗುತ್ತದೆ. ಆದುದರಿಂದ ದೃಶ್ಯ ಮಾಧ್ಯಮ ಕೊಠಡಿ, ಕಂಪ್ಯೂಟರ್ ಕೇಂದ್ರವು ಇದಕ್ಕೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆ ಬಗ್ಗೆ ವಿದ್ಯಾ ಸಂಸ್ಥೆಯು ಗಮನ ಕೊಡುತ್ತದೆ. ಎಂದು ಮೊನ್ಸಿಚೊರ್ ಡೆನಿಸ್ ಮೊರಸ್ ಪ್ರಭು, ಸಭಾ ಅಧ್ಯಕ್ಷರು ಶುಭ ಹಾರೈಸಿದರು.
ಮಕ್ಕಳ ಶಿಕ್ಷಣವು ಪರಿಪೂರ್ಣತೆಗೆ ಹೆತ್ತವರು ಪ್ರತಿದಿನ ಮಕ್ಕಳ ಬಗ್ಗೆ ಸೂಕ್ಷವಾಗಿ ಗಮನಿಸಬೇಕು. ಮೌಲ್ಯಾಧಾರಿತ ಹೆತ್ತವರ ಜೀವನ ಮಕ್ಕಳಿಗೆ ಪ್ರೇರಣೆಯಾಗಬೇಕು. ವಿದ್ಯಾ ಸಂಸ್ಥೆಗಳು ಮಕ್ಕಳ ಜೀವನದ ಪ್ರತಿಯೊಂದು ಕ್ಷೇತ್ರಕ್ಕೆ ಗಮನ ಕೊಡುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ಗೌರವ ಪೂರ್ವಕವಾಗಿ ಬೆಳಸಬೇಕಾಗುತ್ತದೆವೆಂದು ವಂ. ಜೆರೆಲ್ಡ್ ಡಿ’ಸೋಜಾರವರು ನುಡಿದರು.
ಶಿಕ್ಷಕ-ರಕ್ಷಕ ಸಭೆಯನ್ನು ಉದ್ಘಾಟಿಸಿ ಶ್ರೀಮತಿ ಅನಿತಾ ಅಮರ್‌ನಾಥ್ ಹೆತ್ತವರಿಗೆ, ರಕ್ಷಕರಿಗೆ ಬೋದನೆಯನ್ನು ಮಾಡಿದರು. ಶ್ರೀಮತಿ ಜಿನೆಟ್ ಫೆರ್ನಾಂಡಿಸ್ ಶುಭ ಹಾರೈಸಿದರು. ಶ್ರೀಮತಿ ಮೆಜಿಟಾ ಮಿನೆಜಸ್ ಕಾರ್‍ಯಕ್ರಮ ನಿರೂಪಿಸಿದರು. ವಂ. ಫಾ| ಜೆ.ಬಿ. ಕ್ರಾಸ್ತ, ಸಂಚಾಲಕರು, ಸ್ವಾಗತಿಸಿದರು. ಶ್ರೀಮತಿ ಶೋಭಿ ಪ್ರಾನ್ಸಿರವರು ವಂದಿಸಿದರು. ಎಲ್.ಕೆ.ಜಿ., ಯು.ಕೆ.ಜಿ. ಉಸ್ತುವಾರು ಶಿಕ್ಷಕಿ ಶ್ರೀಮತಿ ಜೊವಿಟಾ ಸಿಕ್ವೆರಾ ವಂ. ವಿನ್ಸೆಟ್ ಡಿ’ಸೊಜ, ವಂ. ಫಾ| ರೊಕ್ಕಿ ಫೆರ್ನಾಂಡಿಸ್, ಶ್ರೀ ಅಲೋಶಿಯಸ್ ಡಿಸೋಜ, ಸಿಸ್ಟರ್ ಆಂಟನಿ ಮೇರಿ, ಶಿಕ್ಷಕ ರಕ್ಷಕ ಸಂಘದ ಕಾರ್‍ಯದರ್ಶಿ, ಶೈಲಾ ಆಲ್ಮೇಡಾರವರು ಉಪಸ್ಥಿತರಿದ್ದರು.