ಕಾರು ಅಂದರೆ ಎಲ್ಲರಿಗೂ ಅಚ್ಚುಮೆಚ್ಚಿನ ವಾಹನ. ಎಸಿಯಿಂದ ಹಿಡಿದು ಎಲ್ಲ ಸೌಲಭ್ಯ ಇರುವ ಲಕ್ಸುರಿ ಕಾರು ಕೊಳ್ಳುವುದಿರಲಿ ನೋಡಿದರೂ ಸಾಕು ಮಹದಾನಂದ. ಅಂತಹುದರಲ್ಲಿ ಕಾರಿನಲ್ಲಿಯೇ ಬೆಡ್ ರೂಮ್, ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್ ಇದ್ರೆ.
ಅದೇನು ಹಡಗು ಅಂದ್ಕೊಂಡ್ರಾ ಅಂತೀರಲ್ವಾ. ಆದರೆ ಇಂತಹುದೇ ಕಾರೊಂದು ಇದೆ. ಹೌದು ! ಈ ಕಾರು ಎಲ್ಲ ಅದ್ಭುತಗಳನ್ನು ಒಳಗೊಂಡಿದ್ದು ನೋಡುಗರಿಗೆ ಅಚ್ಚರಿ ಮೂಡಿಸುತ್ತೆ. ಸುಮಾರು 100 ಅಡಿ ಉದ್ದವಾಗಿರುವ ಈ ಕಾರಿಗೆ 26 ಟೈರ್ ಗಳಿದ್ದು ಪುಟ್ಟ ರೈಲಿನಂತೆಯೇ ಇದೆ.
ವಿಶೇಷ ಎಂದರೆ ಇದರಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಪ್ರತ್ಯೇಕವಾದ ಕೊಠಡಿಗಳಿದ್ದು ಸ್ವಿಮ್ಮಿಂಗ್ ಪೂಲ್, ಬೆಡ್‍ಗಳು ಜೊತೆಗೆ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಹೆಲಿಪ್ಯಾಡ್ ಸಹ ಇದ್ದು, ಇದು ಪ್ರಪಂಚದ ಅತ್ಯಂತ ಉದ್ದವಾದ ಕಾರು ಎಂಬ ಖ್ಯಾತಿಗೂ ಒಳಗಾಗಿದೆ.
ಈ ಹಡಗಿನ ಸ್ವರೂಪದ ಕಾರು ತಯಾರಿಸಿದ್ದು ಜೇ ಓರ್‍ಬರ್ಗ್ ಎಂಬಾತ. ಹಾಲಿವುಡ್ ಸಿನಿಮಾಗಳಿಗೆ ಕಾರು ತಯಾರಿಸಿ ಕೊಡುವ ಕೆಲಸ ಮಾಡುವ ಈತ ತನ್ನದೇ ಆದ ಆಲೋಚನಾ ಲಹರಿಯಲ್ಲಿ ಕಾರು ತಯಾರಿಸುತ್ತಾನೆ.