ಮಂಗಳೂರು: ಉಳ್ಳಾಲ ಸ್ಫೋಟಕ ವಸ್ತುಗಳ ಪತ್ತೆ ಪ್ರಕರಣದ ಮೂವರು ಶಂಕಿತ ಆರೋಪಿಗಳನ್ನು ಗುರುವಾರ ಮಂಗಳೂರಿನ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದಾರೆ.
ಆರೋಪಿಗಳನ್ನು ಶಬೀರ್ ಭಟ್ಕಳ್, ಸೈಯದ್ ಮುಹಮ್ಮದ್ ನೌಶಾದ್ ಮತ್ತು ಅಹ್ಮದ್ ಬಾವ ಅಬೂಬಕ್ಕರ್ ಎಂದು ಹೆಸರಿಸಲಾಗಿದೆ. 2007ರಲ್ಲಿ ಉಳ್ಳಾಲದ ಮುಕ್ಕಚ್ಚೇರಿಯ ಮನೆಯೊಂದರಲ್ಲಿ ಸ್ಫೋಟಕ ಸಾಮಾಗ್ರಿಗಳನ್ನು ಇಟ್ಟುಕೊಂಡಿರುವ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು.
ಮೂವರು ಶಂಕಿತರಲ್ಲಿ ನೌಶಾದ್ ಮತ್ತು ಅಬೂಬಕ್ಕರ್ ಎಂಬವರನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ 13 ಮಂದಿ ಆರೋಪಿಗಳಾಗಿದ್ದು, ಇವರಲ್ಲಿ ಐದು ಮಂದಿ ತಲೆಮರೆಸಿಕೊಂಡಿದ್ದಾರೆ. ಮತ್ತು ಜಾವೇದ್ ಅಲಿ, ಮುಹಮ್ಮದ್ ಅಲಿ, ಮುಹಮ್ಮದ್ ರಫೀಕ್ ಮತ್ತು ಫಕೀರ್ ಅಹ್ಮದ್ ಎಂಬ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಶಬೀರ್ ಭಟ್ಕಳ್ ನನ್ನು ಮಂಗಳೂರಿನ ಜಿಲ್ಲಾ ಕರಾಗೃಹದಲ್ಲಿಡಲಾಗಿದೆ.
2007ರಲ್ಲಿ ಖಚಿತ ಮಾಹಿತೆ ಮೇರೆಗೆ ಉಳ್ಳಾಲದ ಮುಕ್ಕಚ್ಚೇರಿಯ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಸ್ಫೋಟಕ ಸಾಮಾಗ್ರಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಉಳ್ಳಾಲದ ಇಬ್ಬರು ಹಾಗೂ ಮಂಗಳೂರಿನ ನಾಲ್ಕು ಮಂದಿ ಸೇರಿದಂತೆ ಒಟ್ಟು ಆರು ಮಂದಿ ಶಂಕಿತರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.
ಪ್ರಕರಣದಲ್ಲಿ ಬಂಧಿಸಲ್ಪಟ್ಟ ಎಲ್ಲಾ ಆರೋಪಿಗಳ ಮೇಲೆ ಆ್ಯಂಟಿ ಟೆರರ್ ಲಾ ಆ್ಯಂಡ್ ಇಲ್ಲೀಗಲ್ ಪೊಶಸೆನ್ ಆಫ್ ವೆಫನ್ಸ್ ಪ್ರಕರಣ ದಾಖಲಿಸಲಾಗಿತ್ತು.