ರಾಷ್ಟ್ರೀಯ

ಇವರು ಧರಿಸಿದ ಚಿನ್ನ ನೋಡಿದರೆ ದಂಗಾಗ್ತೀರಿ !

Pinterest LinkedIn Tumblr

moಚಿನ್ನ ಧರಿಸಿ ಓಡಾಡುವುದೆಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು. ಅದೊಂದು ಪ್ರತಿಷ್ಠೆಯ ವಿಷಯವೂ ಕೂಡ. ಆದರೆ ಇಲ್ಲೊಬ್ಬ ಭಕ್ತರೊಬ್ಬರು  ಬರೋಬ್ಬರಿ 11 ಕೆ ಜಿ ಚಿನ್ನ ಧರಿಸಿ ಭೋಲೇನಾಥನ ದರ್ಶನ ಪಡೆದು ಪುನೀತರಾಗಿದ್ದಾರೆ.

ಹೌದು. ಉತ್ತರಪ್ರದೇಶದ ಮುಜಾಫರ್‍ನಗರದ ಭಕ್ತರೊಬ್ಬರು ಭೋಲೇನಾಥನ ದರ್ಶನಕ್ಕಾಗಿ ತೆರಳಿದ್ದು ಈ ಸಮಯದಲ್ಲಿ ಬರೋಬ್ಬರಿ 11 ಕೆಜಿ ತೂಕವಿರುವ ಚಿನ್ನದ ಆಭರಣಗಳನ್ನು ಧರಿಸಿ ಭೋಲೇನಾಥನ ದರ್ಶನ ಪಡೆದಿದ್ದಾರೆ.ಈ ರೀತಿಯ ಚಿನ್ನ ಧರಿಸುವುದರಿಂದ ಚಿನ್ನದಲ್ಲಿ ಇಷ್ಟ ದೇವರು ನೆಲೆಸಿರುವ ಕಾರಣ ಸಾಕ್ಷಾತ್ ಪರಮಾತ್ಮ ನಮ್ಮ ಜತೆ ಇದ್ದಂತೆ ಭಾಸವಾಗುತ್ತದೆ ಹಾಗಾಗಿ ಭೋಲೇನಾಥನ ದರ್ಶನಕ್ಕೆ ಇಷ್ಟೊಂದು ಚಿನ್ನ ಧರಿಸಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ವಿಶೇಷವೆಂದರೆ ಇಷ್ಟೊಂದು ಪ್ರಮಾಣದಲ್ಲಿ ಚಿನ್ನದ ಆಭರಣಗಳನ್ನು ಧರಿಸಿರುವ ವ್ಯಕ್ತಿ ಈಗ ಗೋಲ್ಡನ್ ಬಾಬಾ ಎಂದೇ ಪ್ರಸಿದ್ಧರಾಗಿದ್ದು ತಮ್ಮ ರಕ್ಷಣೆಗಾಗಿ ಗೋಲ್ಡನ್ ಬಾಬಾ 25 ಜನ ಬಾಡಿಗಾರ್ಡ್‍ಗಳನ್ನು ಇಟ್ಟುಕೊಂಡಿದ್ದಾರೆ. ಈ ತಂಡ ಗೋಲ್ಡನ್ ಬಾಬಾ ಅವರನ್ನು ರಕ್ಷಣೆ ಮಾಡುವುದಲ್ಲದೇ, ಸಾಮಾನ್ಯ ಜನರಿಂದ ಬಾಬಾರನ್ನು ದೂರ ಇಡುವ ಮೂಲಕ ಅವರನ್ನು ಅವರು ಧರಿಸಿರುವ ಚಿನ್ನವನ್ನೂ ರಕ್ಷಿಸುತ್ತಾರಂತೆ.

Write A Comment