ಮೈಸೂರು, ಆ.8 -ಸೆಕೆಂಡ್‌ಹ್ಯಾಂಡ್ ವಾಹನವನ್ನು ಖರೀದಿಸಿದ 15 ದಿನಗಳಲ್ಲಿ ಮಾಲಿಕತ್ವದ ಹೆಸರು ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಎಚ್ಚರಿಸಿದ್ದಾರೆ. ಸೆಕೆಂಡ್‌ಹ್ಯಾಂಡ್ ವಾಹನವನ್ನು ಖರೀದಿಸಿದವರು 15 ದಿನಗಳೊಳಗಾಗಿ ಸಂಬಂಧಪಟ್ಟ ಆರ್‌ಟಿಒ ಕಚೇರಿಗಳಲ್ಲಿ ತಮ್ಮ ಹೆಸರಿಗೆ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್‌ಸಿ) ನಲ್ಲಿ ವಾಹನವನ್ನು ನೋಂದಾಯಿಸಿಕೊಳ್ಳಬೇಕು ಎಂದರು. ವಾಹನ ಖರೀದಿಸಿದವರು ಕೇಂದ್ರ ಮೋಟಾರು ವಾಹನ ಖಾಯ್ದೆ ಪ್ರಕಾರ ಆರ್‌ಸಿ ಬುಕ್‌ನಲ್ಲಿ ತಮ್ಮ ಹೆಸರಿಗೆ ವಾಹನ ನೋಂದಣಿ ಮಾಡಿಕೊಳ್ಳುವುದು ಖಡ್ಡಾಯ ಎಂದರು.
ಇತ್ತೀಚಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸಿದವರು ತಮ್ಮ ಹೆಸರಿಗೆ ವಾಹನ ನೋಂದಣಿ ಮಾಡಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ 15 ದಿನಗಳ ಗಡುವು ನೀಡಲಾಗಿದೆ. ಅಷ್ಟರಲ್ಲಿ ಮಾಲಿಕತ್ವದ ನೋಂದಣಿ ಮಾಡಿಸಿಕೊಳ್ಳುವುದು ಖಡ್ಡಾಯ. ಇಲ್ಲದಿದ್ದರೆ ಅಂತಹವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತ ದಯಾನಂದ್ ಎಚ್ಚರಿಸಿದ್ದಾರೆ.