ವಿಶ್ವದಾದ್ಯಂತ ಸದ್ದು ಮಾಡಿ, ದಾಖಲೆ ಸ್ಥಾಪಿಸಿ, ಬಾಲಿವುಡ್ ಮಂದಿಯ ನಿದ್ದೆಗೆಡಿಸಿ ಮುನ್ನುಗ್ಗುತ್ತಿರುವ ಎಸ್.ಎಸ್.ರಾಜಮೌಳಿ ಅವರ ಶತಮಾನದ ಚಿತ್ರ ‘ಬಾಹುಬಲಿ’ಯಲ್ಲಿ ಕರ್ನಾಟಕದ ಪಾಲೂ ಸಾಕಷ್ಟಿದೆ.
ಮೂಲ ಕತೆಗಾರನೇ ಕನ್ನಡಿಗ. ಅನೇಕ ತಂತ್ರಜ್ಞರು ಕನ್ನಡಿಗರು. ಖ್ಯಾತ ನಟ ಸುದೀಪ್ ಕನ್ನಡದವನು. ಇವೆಲ್ಲದರ ಜತೆಗೆ ನೀವುಗಳಾರೂ ಗಮನಿಸದ ಇನ್ನೊಬ್ಬ ವ್ಯಕ್ತಿ ಈ ಚಿತ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಇದು ಸತ್ಯವಾದ ಮಾತು.
ಬಾಹುಬಲಿಯಲ್ಲಿ ಪ್ರತಿಯೊಂದು ದೃಶ್ಯವೂ ಅದ್ಭುತವೇ. ಅದರಲ್ಲೂ ಮುಖ್ಯ ಪಾತ್ರಧಾರಿ ಪ್ರಭಾಸ್‌ನ ಒಂದೊಂದು ನಡೆಯೂ, ನುಡಿಯೂ ಫೆಂಟಾಸ್ಟಿಕ್. ಈ ಚಿತ್ರದಲ್ಲಿ ಪ್ರಭಾಸ್ ಭಾರೀ ಶಿಲೆಯೊಂದನ್ನು ಏರುವುದು ನಿಜಕ್ಕೂ ಮೈ ನವಿರೇಳಿಸುವ ದೃಶ್ಯ. ಈ ಬಂಡೆ ಆರೋಹಣಕ್ಕೆ ಪ್ರಭಾಸ್‌ಗೆ ತರಬೇತಿ ನೀಡಿದ್ದು ಯಾರು ಗೊತ್ತೆ… ರಾಜಧಾನಿ ಬೆಂಗಳೂರಿನ ಒಬ್ಬ ವ್ಯಕ್ತಿ..! ಈ ವ್ಯಕ್ತಿಯ ಹೆಸರು ಸುಧೀಂದ್ರ ಸುಬ್ಬರಾವ್ ಅಂತ. ಸುಧೀಂದ್ರ ಸುಬ್ಬರಾವ್ ಅವರು ಪ್ರಭಾಸ್‌ನ ಈ ದೃಶ್ಯ ಎಲ್ಲರೂ ಬೆರಗಾಗುವಂತೆ ಮೂಡಿಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಆಶ್ಚರ್ಯವೆನಿಸಿದರೂ ಸತ್ಯ.