ರಾಷ್ಟ್ರೀಯ

ಸತ್ಯಕ್ಕೆ ಜಯವಿದೆ, ಶಿವನೇ ಸತ್ಯವನ್ನು ಹೊರಹಾಕಲಿದ್ದಾನೆ: ದೇವ ಮಹಿಳೆ ರಾಧೆ ಮಾ

Pinterest LinkedIn Tumblr

Radhe-Maaಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ಮಿನಿ ಸ್ಕರ್ಟ್ ಫೋಟೋನಲ್ಲಿರುವ ಫೋಟೋ ( ರಾಹುಲ್ ಮಹಾಜನ್ ಟ್ವೀಟ್ ಮಾಡಿರುವ ಚಿತ್ರ)
ಮುಂಬೈ: ಬಂಧನದ ಭೀತಿಯಲ್ಲಿದ್ದ ಸ್ವಯಂ ಘೋಷಿತ ವಿವಾದಿತ ದೇವ ಮಹಿಳೆ ರಾಧೆ ಮಾ ಇದೀಗ ತನ್ನ ವಿರುದ್ಧವಿರುವ ವರದಕ್ಷಿಣ ಕಿರುಕುಳ ಆರೋಪೆವಲ್ಲಾ ಸುಳ್ಳು ಎಂದು ಹೇಳಿದ್ದು, ಶೀಘ್ರದಲ್ಲೇ ಸತ್ಯ ಬಹಿರಂಗವಾಗಲಿದೆ ಎಂದು ಭಾನುವಾರ ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ನನಗೆ ಯಾರ ಮೇಲೂ ದೂರುಗಳಿಲ್ಲ. ಮನುಷ್ಯನ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ಆ ದೇವರ ಇಚ್ಛೆ. ದೇವರ ಆಟದ ಪರಿಣಾಮವಿದು ಅಷ್ಟೇ ದೇವರ ಆಟವನ್ನು ನಿಲ್ಲಿಸುವ ಶಕ್ತಿ ಯಾರಿಗೂ ಇಲ್ಲ. ಆರೋಪಗಳ ಕುರಿತಂತಿರುವ ಸತ್ಯ ಶೀಘ್ರದಲ್ಲೇ ಬಹಿರಂಗವಾಗಲಿದೆ. ಸತ್ಯಕ್ಕೆ ಯಾವಾಗಲೂ ಜಯವಿದೆ. ಸತ್ಯ ಯಾವಾಗಲೂ ಬಹಳ ಸುಂದರವಾಗಿರುತ್ತದೆ. ಆಟವಾಡುತ್ತಿರುವ ಶಿವನೇ ಈ ಸತ್ಯವನ್ನು ಭೇದಿಸುತ್ತಾನೆ. ಸಾಮಾಜಕ್ಕಾಗಿ ಸೇವೆ ಸಲ್ಲಿಸುವವರ ಕೆಲಸಕ್ಕೆ ಯಾರು ತೊಂದರೆ ಕೊಡುತ್ತಾರೋ ಅಂತಹವರ ವಧೆಯನ್ನು ಶಿವನೇ ಮಾಡುತ್ತಾನೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಅವರ ಮೇಲೆ ಆರೋಪ ಮಾಡಿದ್ದ ಮಹಿಳೆಯೊಬ್ಬರು ದೇವ ಮಹಿಳೆ ಸೂಚನೆ ಮೇರೆಗೆ ನನ್ನ ಗಂಡನ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದರಲ್ಲದೇ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ನನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ನನ್ನ ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ರಾಧೆ ಮಾ ಅವರ ಕೈ ವಾಡಿದೆ ಎಂದು ಮುಂಬೈ ನ ಬೊರಿವಲಿ ಕ್ಷೇತ್ರದ ಠಾಣೆಯೊಂದರಲ್ಲಿ ರಾಧೆ ಮಾ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ಮೂಲಕ ರಾಧೆ ಮಾ ಅವರ ವಿರುದ್ಧವಿದ್ದ ಇನ್ನಿತರೆ ಘಟನೆಗಳೂ ಸಹ ನಿಧಾನಗತಿಯಲ್ಲಿ ಬಹಿರಂಗವಾಗಲು ಆರಂಭಿಸಿದವು. ಸಾಮಾಜಿಕ ಜಾಲತಾಣ ಸೇರಿದಂತೆ ದೇಶದ ಜನತೆಯಲ್ಲಿಯೂ ರಾಧೆ ಮಾ ಕುರಿತಂತೆ ಹಲವು ಚರ್ಚೆಗಳು ಹಾಗೂ ವಿರೋಧಗಳು ವ್ಯಕ್ತವಾದವು. ವಿವಾದಗಳು ಚರ್ಚೆಗಳು ಹೆಚ್ಚಾಗುತ್ತಿದ್ದಂತೆ ರಾಧೆ ಮಾಗಾಗಿ ಮುಂಬೈ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಆದರೆ, ಬಂಧನ ಭೀತಿಯಲ್ಲಿದ್ದ ರಾಧೆ ಮಾ ವಿದೇಶಕ್ಕೆ ಹಾರಿದ್ದಾರೆ ಎಂದು ಹೇಳಲಾಗುತ್ತಿತ್ತು. ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ರಾಧೆ ಮಾ ಕಾಣಿಸಿಕೊಂಡಿದ್ದರು. ಇದೀಗ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ರಾಧೆ ಮಾಗೆ ನೋಟಿಸ್ ಜಾರಿ ಮಾಡಿದ್ದು, ಶೀಘ್ರದಲ್ಲೇ ಮುಂಬೈ ಪೊಲೀಸರು ರಾಧೆ ಮಾರನ್ನು ವಿಚಾರಣೆಗೊಳಪಡಿಸಲಿದ್ದಾರೆಂದು ಹೇಳಲಾಗುತ್ತಿದೆ.

Write A Comment