ರಾಷ್ಟ್ರೀಯ

ಮೋದಿಯವರದ್ದು ‘ಟ್ಟಿಟ್ಟರ್ ಸರ್ಕಾರ’ ಎಂದ ನಿತೀಶ್ ಕುಮಾರ್ !

Pinterest LinkedIn Tumblr

7315modi_nitish750‘ಮೋದಿ ವಿರೋಧಿ’ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟ್ಟಿಟ್ಟರ್ ಸರ್ಕಾರ ಎಂದು ಕಟಕಿಯಾಡಿದ್ದಾರೆ.

ರಾಜ್ಯಪಾಲರ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದ ನಿತೀಶ್ ಕುಮಾರ್ ನಮ್ಮಲ್ಲಿರುವ ಸರ್ಕಾರವನ್ನು ಶುದ್ಧವಾಗಿ ಕರೆಯಬೇಕದರೆ ಅದು ಯೂನಿಯನ್ ಟ್ವಿಟ್ಟರ್ ಗವರ್ನ್‍ಮೆಂಟ್ ಎನ್ನಬಹುದು. ಏಕೆಂದರೆ ಸರ್ಕಾರ ಕೇಳುವುದು, ಪ್ರತಿಕ್ರಿಯೆ, ಸ್ಪಂದನೆ ನೀಡುವುದು ಟಿಟ್ಟರ್‍ನಲ್ಲಿ ಮಾತ್ರ ಎಂದು ಟ್ವೀಟ್ ಮೂಲಕವೇ ಎಂದು ವ್ಯಂಗ್ಯ ಮಾಡಿದ್ದಾರೆ.

ಸಂಪ್ರದಾಯದಂತೆ ರಾಜ್ಯಪಾಲರನ್ನು ನೇಮಕ ಮಾಡುವಾಗ ರಾಜ್ಯ ಸರ್ಕಾರದ ಸಲಹೆಯನ್ನು ಕೇಳಬೇಕು. ಆದರೆ ಕೇಂದ್ರ ಸರ್ಕಾರ ಸಲಹೆಯನ್ನು ಕೇಳದೇ ರಾಜ್ಯಪಾಲರನ್ನು ನೇಮಕ ಮಾಡಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೇ ನಮಗೆ ತಿಳಿಯಿತು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿಯೇ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Write A Comment