ರಾಷ್ಟ್ರೀಯ

ಆಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಹಣ ನೀಡಲು ಮುಂದಾದ ಕಾಮುಕ !

Pinterest LinkedIn Tumblr

raprrಕಾಮುಕ ಯುವಕನೊಬ್ಬ ಆಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರ ನಡೆಸಿ ಆಕೆಯ ಬದಲಾಗಿ ಹಣ ನೀಡುತ್ತೇನೆ ಎಂದು ಆಕೆಯ ಪೋಷಕರಿಗೆ ಬೆದರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಭಿಲ್ವಾರಾದಲ್ಲಿ ಈ ಘಟನೆ ನಡೆದಿದ್ದು ನೆರೆಮನೆಯ ಯುವಕನೊಬ್ಬ ಅಪ್ರಾಪ್ತ ಬಾಲಕಿ ಅಂಗಡಿಗೆ ತೆರಳಿದ ಸಮಯದಲ್ಲಿ ಆಕೆಯನ್ನು ಪುಸಲಾಯಿಸಿ ನಿರ್ಜನ ಪ್ರದೇಶವೊನ್ದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿ ಅಲ್ಲಿಂದ ಪಾರಾರಿಯಾಗಿದ್ದ. ಹಲವು ಸಮಯ ಕಳೆದರೂ ಆಕೆ ಬರದಿದ್ದಾಗ ಆಕೆಯ ಪೋಷಕರು ಹುಡುಕಾಟ ನಡೆಸಿದ್ದು ನೆರೆಮನೆಯ ಯುವಕನೊಂದಿಗೆ ಬಾಲಕಿಯನ್ನು ಕಂಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಈ ವಿಷಯ ತಿಳಿದ ಪೋಷಕರು ನೆರೆಮನೆಯ ಯುವಕನ ಮನೆಗೆ ತೆರಳಿ ಬಾಲಕಿ ಎಲ್ಲಿ ಎಂದು ಪ್ರಶ್ನಿಸಿದ್ದು ಬಾಲಕಿಯ ಬದಲಾಗಿ ಹಣ ತೆಗೆದುಕೊಳ್ಳಿ ಎಂದು ಯುವಕನ ಕುಟುಂಬದವರು ಒತ್ತಡ ಹೇರಿದ್ದಾರೆ. ಇದರಿಂದ ಆಕ್ರೋಶಜ್ಞ್ದ ಬಾಲಕಿಯ ಪೋಷಕರು  ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment