ಜಗತ್ತಿಗೆ ಮಾರಕರಾಗಿರುವ ಇಸಿಸ್ ಉಗ್ರರು ಇರಾಕ್ ನ ಮೊಸಲ್ ನಗರದಲ್ಲಿ ತಮ್ಮ ಅಟ್ಟಹಾಸ ಪ್ರದರ್ಶಿಸಿದ್ದು 300 ಕ್ಕೂ ಹೆಚ್ಚು ಮಂದಿ ಸರ್ಕಾರಿ ಅಧಿಕಾರಿಗಳ ಮಾರಣಹೋಮ ನಡೆಸಿದ್ದಾರೆ.
ಮೊಸಲ್ ನಗರದ ಮಿಲಿಟರಿ ಕ್ಯಾಂಪ್ ನಲ್ಲಿ ಇರಾಕ್ ನ ಮುಖ್ಯ ಚುನಾವಣಾ ಆಯೋಗದ ಕೆಲಸ ಮಾಡುತಿದ್ದ ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡ ಉಗ್ರರು ಅದರಲ್ಲಿ 50ಕ್ಕೂ ಹೆಚ್ಚು ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಇನ್ನುಳಿದವರ ಕತ್ತು ಕತ್ತರಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಯಿಂದ ಆಘಾತಗೊಂಡಿರುವ ಇರಾಕ್ ಮಾನವ ಹಕ್ಕು ಆಯೋಗ , ಹಾಗೂ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಅಮಾಯಕರನ್ನು ರಕ್ಷಣೆ ಮಾಡುವಂತೆ ಮೊರೆ ಇಟ್ಟಿದೆ.