ಮನೋರಂಜನೆ

ನಟಿ ಆಸಿನ್ ಮದುವೆ ಆಗುತ್ತಿದ್ದಾರೆ…ಹುಡುಗ ಯಾರು..ಇಲ್ಲಿದೆ ಓದಿ…

Pinterest LinkedIn Tumblr

asin

ಮುಂಬೈ: ‘ಗಜನಿ’ ಖ್ಯಾತಿಯ ನಟಿ ಆಸಿನ್ ದೇಶೀಯ ಸ್ಮಾರ್ಟ್‍ಫೋನ್ ತಯಾರಕ ಕಂಪೆನಿ ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ಮದುವೆಯಾಗಲಿದ್ದಾರೆ. ಈ ಮೂಲಕ ಆಸಿನ್ ಬಾಲಿವುಡ್ ಸಿನಿ ಜಗತ್ತಿಗೆ ವಿದಾಯ ಹೇಳಲಿದ್ದಾಳೆ.

‘ಕಿಲಾಡಿ 786′ ಚಿತ್ರದ ಸಹ ನಟ ಅಕ್ಷಯ್ ಕುಮಾರ್ ರಾಹುಲ್ ಶರ್ಮಾರನ್ನು ಆಸಿನ್‍ಗೆ ಪರಿಚಯಿಸಿದ್ದು ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡಬೇಕು ಎಂದು ಯೋಚಿಸುತ್ತಿದ್ದೇನೆ. ಹೀಗಾಗಿ ನನ್ನ ಎಲ್ಲ ಸಿನಿಮಾ ಕಮಿಟ್‍ಮೆಂಟ್‍ಗಳನ್ನು ಮುಗಿಸಿಕೊಳ್ಳುತ್ತಿದ್ದೇನೆ. ಈ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಪ್ರಾಜೆಕ್ಟ್ ಗೆ ಸಹಿ ಮಾಡುತ್ತಿಲ್ಲ ಎಂದಿದ್ದಾಳೆ.

ದಕ್ಷಿಣ ಸಿನಿಮಾರಂಗದಿಂದ ಬಾಲಿವುಡ್‍ಗೆ ಹಾರಿದ ಆಸಿನ್ ಅಭಿನಯದ ಕೊನೆಯ ಚಿತ್ರ ‘ಆಲ್ ಇಸ್ ವೆಲ್’ ಚಿತ್ರದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನಟಿಸಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾದ ಬಳಿಕ ಸ್ಮೃತಿ ಇರಾನಿ ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಬಾರದ ಕಾರಣದ ಈ ಚಿತ್ರ ಪೂರ್ಣಗೊಳ್ಳಲು 2 ವರ್ಷ ತೆಗೆದುಕೊಂಡಿದೆ. ‘ಆಲ್ ಇಸ್ ವೆಲ್’ ಚಿತ್ರ ಆಗಸ್ಟ್ 21 ರಂದು ತೆರೆಕಾಣಲಿದ್ದು, ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಿಷಿ ಕಪೂರ್ ಮತ್ತು ಸುಪ್ರಿಯಾ ಪಾಟಕ್ ಅಭಿನಯಿಸಿದ್ದಾರೆ.

ಆಸಿನ್ ಮತ್ತು ರಾಹುಲ್ ಶರ್ಮಾರ ಮದುವೆ ಯಾವಾಗ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಬಾಲಿವುಡ್ ಮೂಲಗಳ ಪ್ರಕಾರ ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Write A Comment