ಕರ್ನಾಟಕ

ಬುದ್ದಿಮಾಂದ್ಯ ಯುವತಿ ಈಗ 5 ತಿಂಗಳ ಗರ್ಭಿಣಿ !

Pinterest LinkedIn Tumblr

rapppಶಿವಮೊಗ್ಗ: ಆಕೆ ಏನೂ ಅರಿಯದ ಬುದ್ದಿಮಾಂದ್ಯ ಯುವತಿ. ತನಗೆ ಏನಾದರೂ ಆಕೆಗೆ ಗೊತ್ತಾಗದು. ಇಂತಹ ಯುವತಿ ಈಗ 5 ತಿಂಗಳ ಗರ್ಭಿಣಿ. ಹೀಗೆ ಏನೂ ತಿಳಿಯದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಅದೇ ಗ್ರಾಮದ ಯುವಕ.

ಶಿವಮೊಗ್ಗಕ್ಕೆ ಸಮೀಪದ ಓತಿಘಟ್ಟ ಗ್ರಾಮದ ಬುದ್ದಿಮಾಂದ್ಯ ಯುವತಿಯ ಮೇಲೆ ಅದೇ ಗ್ರಾಮದ ದಿಲೀಪ್ ಎಂಬ ಯುವಕ ಅತ್ಯಾಚಾರವೆಸಗಿದ್ದಾನೆ. ಇದರಿಂದ ಯುವತಿ 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ನಡೆದು ಐದು ತಿಂಗಳಾದರೂ ವಿಷಯ ಮನೆಯವರಿಗೆ ಗೊತ್ತಾಗಿರಲಿಲ್ಲ.

ಈಗ ಅತ್ಯಾಚಾರದ ಸಂಗತಿ ಬೆಳಕಿಗೆ ಬಂದಿದ್ದು, ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment