ಕರ್ನಾಟಕ

ಮಕ್ಕಳಿಗೆ ನೇಣು ಹಾಕಿ ಆತ್ಮಹತ್ಯೆಗೆ ಶರಣಾದ ಮಹಾ ತಾಯಿ

Pinterest LinkedIn Tumblr

hangaಬೆಂಗಳೂರು, ಆ.10- ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮಕ್ಕಳಿಬ್ಬರಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸೂಲಿಕುಂಟೆ ಗ್ರಾಮದ ಆಶಾ ತನ್ನ ಮಕ್ಕಳಾದ ಕೀರ್ತನಾ (11) ಮತ್ತು ಲಕ್ಷ್ಮೀ (9) ಗೆ ನೇಣು ಬಿಗಿದು ತಾನೂ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆಶಾ ಅವರಿಗೆ ಗರ್ಭಕೋಶದ ತೊಂದರೆಯಿದ್ದು, ಚಿಕಿತ್ಸೆ ಪಡೆದರೂ ಗುಣಮುಖರಾಗಿರಲಿಲ್ಲ ಎನ್ನಲಾಗಿದೆ.

ಇದರಿಂದಾಗಿ ತೀವ್ರ ನೋವು ಅನುಭವಿಸುತ್ತಿದ್ದ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಂದು ಮೃತಳ ತಂದೆ ನಾರಾಯಣ ರೆಡ್ಡಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ನಿನ್ನೆ ಗಂಡ ಹಾಗೂ ಅತ್ತೆ-ಮಾವ ಹೊಲಕ್ಕೆ ಹೋಗಿದ್ದಾಗ ಆಶಾ ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃಷ್ಣಗಿರಿ ಜಿಲ್ಲೆ ಬೋಪನಹಳ್ಳಿಯ ವಾಸಿ ತಂದೆ ನಾರಾಯಣ ರೆಡ್ಡಿ ಅವರು ಸಂಜೆ ಮನೆಗೆ ಬಂದು ಮಗಳು, ಮೊಮ್ಮಕ್ಕಳು ನೇಣು ಬಿಗಿದುಕೊಂಡಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಆಶಾ ಪತ್ರವೊಂದನ್ನು ಬರೆದಿದ್ದು, ತಾಯಿಯಿಲ್ಲದೆ ನಾನು ಅನುಭವಿಸಿದ ನೋವನ್ನು ನನ್ನ ಮಕ್ಕಳು ಅನುಭವಿಸಬಾರದೆಂದು ಅವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment