ಲಂಡನ್ : ರೋಬೋಟ್ ಜತೆ ಸೆಕ್ಸ್ ಮಾಡುವುದಾ? ಹುಬ್ಬೇರಿಸಬೇಡಿ. ಇನ್ನೊಂದಷ್ಟು ಕಾಲ ಕಳೆದರೆ ಮನುಷ್ಯರು ರೋಬೋಟ್ ಜತೆ ಸೆಕ್ಸ್ ಮಾಡುವಂಥಾ ಪರಿಸ್ಥಿತಿ ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ರೋಬೋಫೀಲಿಯಾ (ರೋಬೋಟ್ ಜತೆ ಲೈಂಗಿಕಾಸಕ್ತಿ) ಜನರಲ್ಲಿ ಮೂಡುತ್ತಿದ್ದು, ಇದರಿಂದಾಗಿ ರೋಬೋಟ್ ಜತೆ ಅವರು ಸೆಕ್ಸ್ ಮಾಡುವ ಕಾಲ ದೂರವಿಲ್ಲ.
ತಂತ್ರಜ್ಞಾನದಲ್ಲಿ ಬೆಳವಣಿಗೆಯಾಗುತ್ತಿದ್ದಂತೆ ಜನರು ಅದರ ಕಾರ್ಯ ವೈಖರಿಗೆ ಮಾರು ಹೋಗುತ್ತಾರೆ. ಇನ್ನೊಂದು ಐವತ್ತು ವರ್ಷ ಕಳೆದರೆ ಜನರಿಗೆ ರೋಬೋಟ್ ಮೇಲೆ ಪ್ರೀತಿ ಹುಟ್ಟಿ ಅದರ ಜತೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತರಾಗುತ್ತಾರೆ. ಜನರಿಗೆ ನಿಜವಾದ ಜೀವನ ಸಂಗಾತಿಯ ಬದಲು ವರ್ಚುವಲ್ ಸಂಗಾತಿಯ ಮೇಲೆಯೇ ಹೆಚ್ಚಿನ ಆಸಕ್ತಿ ಹುಟ್ಟಿಕೊಳ್ಳುತ್ತದೆ ಎಂಬುದು ತಜ್ಞರ ಅಂಬೋಣ.
ಸೆಕ್ಸ್ ಟೆಕ್ ಎಂಬುದು ಈಗ ಹೆಚ್ಚು ಗಮನ ಸೆಳೆಯುತ್ತಿದ್ದು, 2070 ಇಸವಿಗೆ ಜನರು ರೋಬೋಟ್ ಜತೆ ಶಾರೀರಿಕ ಸಂಪರ್ಕವನ್ನು ಬೆಳೆಸುವಂಥಾ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸೆಕ್ಸ್ ಮತ್ತು ಸಂಬಂಧಗಳ ಸೈಕಾಲಜಿ ತಜ್ಞ ಡಾ. ಡ್ರಿಸ್‌ಕೋಲ್ ಹೇಳಿದ್ದಾರೆ.