ಬಾಲಿವುಡ್ ನಲ್ಲಿ ಅನೇಕರ ಜೀವನಾಧಾರಿತ ಸಿನಿಮಾಗಳು ಬಂದಿದೆ. ಇದೀಗ ಮತ್ತೊಂದು ಜೀವನಾಧಾರಿತ ಸಿನಿಮಾವೊಂದಕ್ಕೆ ವೇದಿಕೆ ರೆಡಿಯಾಗುತ್ತಿದೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನ ಕಥೆಯನ್ನು ಸಿನಿಮಾ ಮಾಡೋದಕ್ಕೆ ಅವರ ಗೆಳತಿ ನಿರ್ದೇಶಕಿ ಫರ್ಹಾ ಖಾನ್ ನಿರ್ಧರಿಸಿದ್ದಾರೆ.
ಇನ್ನು ಬಾಲಿವುಡ್ ನಲ್ ಕ್ರೀಡಾ ತಾರೆಯೊಬ್ಬರ ಜೀವನಕಥೆ ಸಿನಿಮಾವಾಗುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಮಿಲ್ಖಾ ಸಿಂಗ್ ಜೀವನ ಕಥೆ ಆಧರಿಸಿ ಭಾಗ್ ಮಿಲ್ಖಾ ಭಾಗ್ ಅನ್ನೋ ಸಿನಿಮಾ ತಯಾರಾಗಿತ್ತು. ಮಾಜಿ ಕ್ರಿಕೆಟಿಗೆ ಅಜರುದ್ದೀನ್ ಅವರ ಜೀವನಕಥೆಯನ್ನು ಆಧರಿಸ ಅಜರ್ ಅನ್ನೋ ಸಿನಿಮಾ ಈಗಾಗಲೇ ಶೂಟಿಂಗ್ ಹಂತದಲ್ಲಿದೆ. ಹೀಗಿರುವಾಗಲೇ ಫರ್ಹಾ ಖಾನ್ ತಮ್ಮ ಸ್ನೇಹಿತ ಸಾನಿಯಾ ಸಿನಿಮಾ ಮಾಡಲು ಹೊರಟಿದ್ದಾರೆ.
ಸಾನಿಯಾ ಜೀವನಾಧಾರಿತ ಸಿನಿಮಾಗೆ ನಾಯಕಿಯಾಗಿ ಪರಿಣಿತಿ ಛೋಪ್ರಾ ಅವರನ್ನು ಆಯ್ಕೆ ಮಾಡಲು ಫರ್ಹಾ ಖಾನ್ ಚಿಂತನೆ ನಡೆಸಿದ್ದಾರೆ. ಸಾನಿಯಾ ಕೂಡ ಸಿನಿಮಾಗೆ ಪರಿಣಿತಿ ನಾಯಕಿಯಾಗಿದ್ರೆ ನನ್ನದೇನು ಅಭ್ಯಂತರವಿಲ್ಲ ಎಂದು ತಮ್ಮ ಕಡೆಯಿಂದ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ.