ಅಂತರಾಷ್ಟ್ರೀಯ

‘ಗೂಗಲ್’ ನ ನೂತನ ಸಿಇಓ ಆಗಿ ಚೆನ್ನೈ ಮೂಲದ ಸುಂದರ್ ಪಿಚ್ಚೈ ಆಯ್ಕೆ

Pinterest LinkedIn Tumblr

Sundar Pichai

ನ್ಯೂಯಾರ್ಕ್: ಇಂಟರ್ ನೆಟ್ ದೈತ್ಯ ಗೂಗಲ್ ಸಂಸ್ಥೆಯ ನೂತನ ಸಿಇಓ ಆಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯ ಪುನಾರಚನೆಗೆ ಮುಂದಾಗಿರುವ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಸರ್ಜೇಬ್ರಿನ್ ಅವರು ಸುಂದರ್ ಪಿಚ್ಚೈ ಅವರನ್ನಾ ನೂತನ ಸಿಇಓ ಆಗಿ ಘೋಷಿಸಿದ್ದಾರೆ.

ತಮಿಳುನಾಡಿನ ಚೆನ್ನೈ ನಿವಾಸಿಯಾದ 43 ವರ್ಷದ ಸುಂದರ್ ಪಿಚ್ಚೈ ಐಐಟಿ ಕರಗ್ ಪುರ್ ನಲ್ಲಿ ಇಂಜಿನಿಯರ್ ಪದವಿ ಪಡೆದಿದ್ದಾರೆ. ನಂತರ ಅಮೆರಿಕದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಹಾಗೂ ವಾಟನ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಶಿಕ್ಷಣ ಪಡೆದಿದ್ದಾರೆ.

ನಂತರ ರೋಬಾ ಜೈ ಸಾಫ್ಟವೇರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ, ಕಳೆದ ವರ್ಷ ಪ್ರಾಡೆಕ್ಟ್ ಮ್ಯಾನೇಜರ್ ಆಗಿ ಗೂಗಲ್ ಸಂಸ್ಥೆಗೆ ಸೇರ್ಪಡೆಗೊಂಡರು. ಅಲ್ಲಿಂದ ಕೇವಲ ಒಂದೇ ವರ್ಷದಲ್ಲಿ ಅದೇ ಸಂಸ್ಥೆಯ ಸಿಇಓ ಆಗಿ ಪಿಚ್ಚೈ ಬಡ್ತಿ ಪಡೆದಿದ್ದಾರೆ.

ಸುಂದರ್ ಪಿಚ್ಚೈ ಅವರನ್ನು ಆಯ್ಕೆ ಮಾಡಿರುವ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್, ಸುಂದರ್ ಅವರ ಡೆಡಿಕೇಶನ್ ಹಾಗೂ ಸಂಸ್ಥೆಗೆ ಸಲ್ಲಿಸುತ್ತಿರುವ ಸೇವೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.

Write A Comment