ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪನ್ಹಾಲಾ ಫೋರ್ಟ್ ಸಮೀಪದ ಫಾರ್ಮ್ಹೌಸ್‌ವೊಂದಕ್ಕೆ ಶನಿವಾರ ತಡರಾತ್ರಿ ದಾಳಿ ನಡೆಸಿದ ಅಪರಾಧ ವಿಭಾಗದ ಪೊಲೀಸರು, ಕೃಷಿ ಪರ್ಯಟನ ಕೇಂದ್ರದ ಹೆಸರಿನಲ್ಲಿ ನಡೆಸಲಾಗುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿ ದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮಾಲಕಿ ಸಮೇತ 9 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕರ್ನಾಟಕದವರೇ ಹೆಚ್ಚು. ಇವರಲ್ಲಿ ಕರ್ನಾಟಕದ ಸಚಿವರೊಬ್ಬರ ಆಪ್ತ ಸಹಾಯಕ ಎನ್ನಲಾದ ಬೆಳಗಾವಿ ಜಿಲ್ಲೆ ಯಮಕನಮರಡಿ ಮೂಲದ ಕಿರಣ್ ಸಿಂಗ್ ರಜಪೂತ್ (30) ಹಾಗೂ ಕರ್ನಾಟಕ ಸರ್ಕಾರದ ಕೆಲ ಅಧಿಕಾರಿಗಳಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯ ಪನ್ಹಾಲಾ ಫೋರ್ಟ್ ಸಮೀಪದ ಫಾರ್ಮ್ಹೌಸ್‌ವೊಂದಕ್ಕೆ ಶನಿವಾರ ತಡರಾತ್ರಿ ದಾಳಿ ನಡೆಸಿದ ಅಪರಾಧ ವಿಭಾಗದ ಪೊಲೀಸರು, ಕೃಷಿ ಪರ್ಯಟನ ಕೇಂದ್ರದ ಹೆಸರಿನಲ್ಲಿ ನಡೆಸಲಾಗುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡಾ ಮಾಲಕಿ ಸಮೇತ 9 ಜನರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಕರ್ನಾಟಕದವರೇ ಹೆಚ್ಚು ಮತ್ತು ಇವರಲ್ಲಿ ಕರ್ನಾಟಕದ ಸಚಿವರ ಆಪ್ತ ಸಹಾಯಕ ಎಂದು ಹೇಳಲಾದ ವ್ಯಕ್ತಿ ಹಾಗೂ ಕರ್ನಾಟಕ ಸರ್ಕಾರದ ಕೆಲ ಅಧಿಕಾರಿಗಳಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಬಂಧಿತರನ್ನು ಕರ್ನಾಟಕ ಸಚಿವರ ಖಾಸಗಿ ಸಹಾಯಕ ಎನ್ನಲಾದ ಬೆಳಗಾವಿ ಜಿಲ್ಲೆ ಯಮಕನಮರಡಿ ಮೂಲದ ಕಿರಣ್ ಸಿಂಗ್ ರಜಪೂತ್ (30), ಸಂಕೇಶ್ವರ ಬಳಿ ಅಂಕಲಿಯ ಗುತ್ತಿಗೆದಾರ ಅಪ್ಪಾಸಾಹೇಬ ರಾಮಗೌಡ ಪಾಟೀಲ (40), ಸವದತ್ತಿ ತಾಲೂಕಿನ ಮಂಜುನಾಥ ಕಲಘಟಗಿ (33), ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ಎನ್ನಲಾದ ನಾಗರಾಜ ಹನುಮಂತಯ್ಯ (39) ಮತ್ತು ಹೇಮಂತ ರಾಮಯ್ಯಗೌಡ ಗೊರೂರು (35, ಬೆಂಗಳೂರು ನಂದಿನಿ ಲೇಔಟ್ ನಿವಾಸಿ), ಬೆಳಗಾವಿಯ ಭಡಕಲಗಲ್ಲಿಯ ಗುತ್ತಿಗೆದಾರ ಶಿವನಗೌಡ ಪಟೀಲ (37), ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿ ಎನ್ನಲಾದ ಬೆಂಗಳೂರಿನ ಮೈಸೂರು ರಸ್ತೆ ನಿವಾಸಿ ಅರುಣ್ ಮುಸ್ಲಿಮಾರಿ (34), ವೇಶ್ಯಾವಾಟಿಕೆ ಅಡ್ಡೆ ಮಾಲಕಿ, ಒಡಿಶಾ ಮೂಲದ ಟೀನಾ ಯಾನೆ ನಮಿತಾ ಪಂಡಿತ್ (40), ಕೃಷಿ ಪರ್ಯಟನ ಕೇಂದ್ರದ ಮಾಲಕ, ಕೊಲ್ಹಾಪುರದ ಬಾಬಾ ಸಾಹೇಬ್ ಕೊಂಡೆ (42) ಎಂದು ಗುರ್ತಿಸಲಾಗಿದೆ ಎಂದು ಸ್ಥಳೀಯ ಅಪರಾಧ ವಿಭಾಗದ ಮೇಲ್ವಿಚಾರಕ ಆಗಿರುವ ಇನ್ಸ್ ಪೆಕ್ಟರ್ ಡಿ. ಎನ್. ಮೋಹಿತೆ ತಿಳಿಸಿದ್ದಾರೆ.
ಇದೇ ವೇಳೆ ಫಾರ್ಮ್ಹೌಸ್‌ನಲ್ಲಿ ನಡೆಸಿದ ಈ ಕಾರ್ಯಾಚರಣೆ ವೇಳೆ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಸುಳಿವಿನ ಮೇರೆಗೆ ದಾಳಿ ನಡೆಸಿ, ನಾವು ಕೃಷಿ ಕೇಂದ್ರದ ಬಾಗಿಲು ತಟ್ಟಿದೆವು. ಆಗ ಎಲ್ಲರೂ ಸಂಗೀತದ ಕುಣಿತದಲ್ಲಿ ಮಗ್ನರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕಾರ್ಯಚರಣೆಯ ವೇಳೆ ಪೊಲೀಸರು ನಗದು, ದೇಶಿ ತಯಾರಿತ ವಿದೇಶಿ ಮದ್ಯ (ಐಎಂಎಫ್‌ಎಲ್), ಮ್ಯೂಸಿಕ್ ಸಿಸ್ಟಂ, ಮೊಬೈಲ್ ಫೋನ್ ಹಾಗೂ ಮೂರು ಎಸ್‌ಯುವಿಗಳ ಸಮೇತ 16.26 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಪನ್ಹಾಲಾ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಬಂಧಿತರನ್ನು ರವಿವಾರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಅವರನ್ನು ಆ. 14ರ ತನಕ ಪೊಲೀಸ್ ಕಸ್ಟಡಿಯಲ್ಲಿ ಇರಿಸುವಂತೆ ನ್ಯಾಯಾಲಯವು ಆದೇಶಿಸಿದೆ.
-ಉದಯವಾಣಿ