ರಾಷ್ಟ್ರೀಯ

ಎಲ್‌ಎಲ್‌ಎಂ ಪರೀಕ್ಷೆಯಲ್ಲಿ ಪೊಲೀಸ್ ಮಹಾನಿರ್ದೇಶಕನಿಂದ ನಕಲು

Pinterest LinkedIn Tumblr

joseಕೊಟ್ಟಾಯಂ: ತ್ರಿಸೂರ್ ಪೊಲೀಸ್ ಮಹಾನಿರ್ದೇಶಕ ಟಿ.ಜೆ. ಜೋಸ್ ಅವರು ಕಳೆದ ಮೇ ತಿಂಗಳಲ್ಲಿ ನಡೆದ ಎಲ್‌ಎಲ್‌ಎಂ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ್ದಾರೆ ಎಂದು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪ ಸಮಿತಿ ಹೇಳಿದೆ.

ಈ ಸಂಬಂಧ ಏಳು ಸದಸ್ಯರನ್ನೊಳಗೊಂಡ ಉಪ ಸಮಿತಿ ಇಂದು ಮಹಾತ್ಮ ಗಾಂಧಿ ವಿವಿ ಕುಲಪತಿ ಶೀನ ಶುಕೂರ್ ಅವರಿಗೆ ವರದಿ ಸಲ್ಲಿಸಿದೆ.

‘ಪರೀಕ್ಷಾ ಮೇಲ್ವಿಚಾರಕರ ಮತ್ತು ಕೊಠಡಿಯಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದ್ದು, ಪೊಲೀಸ್ ಮಹಾನಿರ್ದೇಶಕರು ನಕಲು ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ’ ಎಂದು ಸಮಿತಿಯ ಸದಸ್ಯರೊಬ್ಬರು ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉಪ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಸಿಂಡಿಕೇಟ್ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದಕೊಳ್ಳಲಾಗುವುದು ಎಂದು ವಿವಿ ಮೂಲಗಳು ತಿಳಿಸಿವೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಟಿ.ಜೆ.ಜೋಸ್ ಅವರನ್ನು ದೀರ್ಘಕಾಲ ರಜೆಯ ಮೇಲೆ ಕಳುಹಿಸಲಾಗಿದೆ.

Write A Comment