ಖ್ಯಾತ ಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಜೊತೆ ವಿದೇಶದಲ್ಲಿ ಗುಟ್ಟಾಗಿ ವಿವಾಹ ಮಾಡಿಕೊಂಡಿದ್ದ ಬಾಲಿವುಡ್ ನಟಿ ರಾಣಿ ಮುಖರ್ಜಿ ಈಗ ಗರ್ಭಿಣಿಯಾಗಿದ್ದು, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂದು ಹೇಳಲಾಗಿದೆ.
ತಮ್ಮ ವಿವಾಹದ ಕುರಿತು ಹರಿದಾಡುತ್ತಿದ್ದ ಸುದ್ದಿಗಳನ್ನು ನಿರಾಕರಿಸುತ್ತಲೇ ಬಂದಿದ್ದ ರಾಣಿ ಮುಖರ್ಜಿ ಪ್ರಸ್ತುತ ಲಂಡನ್ ನಲ್ಲಿ ಪ್ರಸವಕ್ಕೆ ಮುಂಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆನ್ನಲಾಗಿದೆ. 2014 ರಲ್ಲಿ ‘ಮರ್ದಾನಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಣಿ ಮುಖರ್ಜಿ ಬಳಿಕ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ‘ಹಸೀನಾ’ ದಲ್ಲಿ ದಾವೂದ್ ಸಹೋದರಿಯ ಪಾತ್ರವನ್ನು ರಾಣಿ ಮುಖರ್ಜಿ ಮಾಡಲಿದ್ದಾರೆಂದು ಹೇಳಲಾಗಿತ್ತಾದರೂ ಅದೀಗ ಸೋನಾಕ್ಷಿ ಸಿನ್ಹಾ ಪಾಲಾಗಿದೆ.
ಗರ್ಭಿಣಿಯಾಗಿದ್ದ ಕಾರಣಕ್ಕಾಗಿಯೇ ಈ ಪಾತ್ರವನ್ನು ರಾಣಿ ಮುಖರ್ಜಿ ನಿರಾಕರಿಸಿದ್ದಾರೆಂದು ಹೇಳಲಾಗಿದ್ದು, ಈ ಮೊದಲು ಸ್ಮೋಕಿಂಗ್ ಅಭ್ಯಾಸ ಹೊಂದಿದ್ದ ರಾಣಿ ಮಗುವಿನ ಕಾರಣಕ್ಕಾಗಿ ಅದನ್ನು ತ್ಯಜಿಸಿದ್ದಾರೆಂದು ಹೇಳಲಾಗಿದೆ. ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ನಲ್ಲಿ ಈಗ ರಾಣಿಯ ಸಹೋದರ ಪ್ರಮುಖ ಸ್ಥಾನದಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.