ಭ್ರಷ್ಟಾಚಾರ ವಿರುದ್ದ ಸಮರ ಸಾರಿರುವ ಹಿರಿಯ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಜೀವ ಬೆದರಿಕೆ ಪತ್ರವೊಂದು ಬಂದಿದ್ದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹವಾಸದಿಂದ ದೂರವಿರಿ ಎಂದು ಪತ್ರದಲ್ಲಿ ಖಡಕ್ ಎಚ್ಚರಿಕೆ ನೀಡಲಾಗಿದೆ.
ಪತ್ರವನ್ನು ಇಂಗ್ಲಿಷ್ ನಲ್ಲಿ ಬರೆದಿದೆ ಎನ್ನಲಾಗಿದ್ದು, ಇದರಲ್ಲಿ ನೀವು ಅರವಿಂದ್ ಕೇಜ್ರಿವಾಲ್ ಅವರ ಸಹವಾಸ ಬಿಟ್ಟು ನಿಮ್ಮ ಹುಟ್ಟೂರು ರಾಲೆ ಗಣಸಿದ್ದಿಯಲ್ಲೇ ಇದ್ದು ಬಿಡಿ. ಒಂದೊಮ್ಮೆ ಕೇಜ್ರಿ ಸಹವಾಸ ಮುಂದುವರೆಸಿದರೆ ವಿಚಾರವಾದಿ ನರೇಂದ್ರ ದಾಭೋಲ್ಕರ್ ಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪತ್ರ ಆಗಸ್ಟ್ 8ರಂದು ಅಣ್ಣಾ ಹಜಾರೆ ಅವರಿಗೆ ಬಂದಿದ್ದು ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಅಹ್ಮದ್ ನಗರ ಜಿಲ್ಲೆಯ ಪರ್ನೆರ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506ಅಡಿಯಲ್ಲಿ ಕೇಸ್ ನ್ನು ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.