ಫೋಟೋ: ಅಶೋಕ್ ಬೆಳ್ಮಣ್
ದುಬೈ, ಆ.12: ಇದೇ 17ರಂದು ದುಬೈಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯ ಕುರಿತು ದುಬೈಯ ಅಲ್ಕಿಸೆಸ್ನಲ್ಲಿರುವ ಫೋರ್ಚುನ್ ಪ್ಲಾಝಾ ಹೊಟೇಲ್ನಲ್ಲಿ ಮಂಗಳವಾರ ರಾತ್ರಿ ನಡೆದ ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಕರ್ನಾಟಕ ವಿಂಗ್ಸ್ ಸಭೆಯಲ್ಲಿ ಯುಎಇಯಲ್ಲಿರುವ ವಿವಿಧ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಯುಎಇ ಇದರ ಮುಖ್ಯ ಕಾರ್ಯದರ್ಶಿ ಭಗೇಶ್ ಭಾಗವಹಿಸಿ ಮಾತನಾಡಿ, ಆ.17ರಂದು ನಮೋ ಇನ್ ದುಬೈ ಕಾರ್ಯಕ್ರಮದ ಕುರಿತು ಹೆಚ್ಚಿನ ಬಗ್ಗೆ ವಿವರಣೆ ನೀಡಿದರು.
ಸ್ವಾಗತ ಭಾಷಣ ಮಾಡಿದ ಪ್ರಭಾಕರ ಅಂಬಲತೆರೆ, ನಮೋ ಇನ್ ದುಬೈ ಕಾರ್ಯಕ್ರಮದ ವಿವರಣೆ ನೀಡಿದರು.
ಅನಂತರ ಮಾತನಾಡಿದ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಮಾಲಕ ಪ್ರವೀಣ್ ಶೆಟ್ಟಿಯವರು ಈ ಕಾರ್ಯಕ್ರಮದ ಯಶಸ್ಸಿಗೆ ಕನ್ನಡಿಗರಾದ ನಾವು ಮಾಡಬೇಕಾದ ಸಿದ್ಧತೆ ಹಾಗೂ ಕೊಡುಗೆಗಳ ಬಗ್ಗೆ ಸಭೆಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ವೆಂಕಟರಮಣ, ನಮೋ ಇನ್ ದುಬೈ ಕಾರ್ಯಕ್ರಮಕ್ಕೆ ಸಂಘದ ಪೂರ್ಣ ಬೆಂಬಲ ವ್ಯಕ್ತಪಡಿಸಿದರು. ದುಬೈ ಕರ್ನಾಟಕ ಸಂಘದ ಪ್ರತಿನಿಧಿಯಾದ ಕೆ.ಆರ್.ತಂತ್ರಿಯವರು ಪ್ರಧಾನಿಯವರ ಕಾರ್ಯಕ್ರಮದ ಬಗ್ಗೆ ಮಾರ್ಗದರ್ಶನ ನೀಡಿದರು.
ರಾಜೇಶ್ ಕುತ್ತಾರು, ನಿತ್ಯಾನಂದ, ವಿನಯ್, ಸುರೇಶ್ ಬೆಳವಾಯಿ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಶುಭ ಹಾರೈಸಿದರು. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ಕನ್ನಡಿದಗರಾದ ನಾವು ತನು-ಮನದಿಂದ ಈ ನಾಡಿನ ಕಾನೂನಿನ ಒಲವಿಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸರ್ವ ಕನ್ನಡಿಗರಲ್ಲೂ ವಿನಂತಿಸಿ ಧನ್ಯವಾದ ಹೇಳುವ ಮೂಲಕ ಪ್ರವೀಣ್ ಶೆಟ್ಟಿಯರು ಕಾರ್ಯಕ್ರಮ ಮುಕ್ತಾಗೊಳಿಸಿದರು.