ರಾಷ್ಟ್ರೀಯ

ಮಹಿಳಾ ಎಸ್ಐ ಮೈ ಕೈ ಮುಟ್ಟಿದ್ದ ಸೀನಿಯರ್ ಸಸ್ಪೆಂಡ್

Pinterest LinkedIn Tumblr

siಛತ್ತೀಸ್ ಘಡ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರಿಗೆ ಲಿಫ್ಟ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಲಾಗಿದೆ.

ಛತ್ತೀಸ್ ಘಡದ ಅಸಿಸ್ಟೆಂಟ್ ಇನ್ಸ್ ಪೆಕ್ಟರ್ ಜನರಲ್ ಸಂಜಯ್ ಶರ್ಮಾ ಸಸ್ಪೆಂಡ್ ಆದ ಅಧಿಕಾರಿಯಾಗಿದ್ದು, ಈತ ಏಪ್ರಿಲ್ 7 ರಂದು ಪೊಲೀಸ್ ಮುಖ್ಯ ಕಛೇರಿಯ ಲಿಫ್ಟ್ ನಲ್ಲೇ ಮಹಿಳಾ ಸಬ್ ಇನ್ಸ್ ಪೆಕ್ಟರ್ ಗೆ ಲೈಂಗಿಕ ಕಿರುಕುಳ ನೀಡಿದ್ದನೆಂದು ಹೇಳಲಾಗಿತ್ತು.

ಈ ಕುರಿತು ಮಹಿಳಾ ಸಬ್ ಇನ್ಸ್ ಪೆಕ್ಟರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ತನಿಖಾ ಸಮಿತಿಯೊಂದನ್ನು ರಚಿಸಲಾಗಿತ್ತು. ಸಂಜಯ್ ಶರ್ಮಾ ಈ ಮಹಿಳಾ ಎಸ್ಐ ಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದುದಲ್ಲದೇ ಸಹೋದ್ಯೋಗಿಗಳ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದನೆಂದು ಆರೋಪಿಸಲಾಗಿತ್ತು.

ಈ ಎಲ್ಲ ಆರೋಪಗಳ ಕುರಿತು ತನಿಖೆ ನಡೆಸಿದ್ದ ತನಿಖಾ ತಂಡ ಮಹಿಳಾ ಎಸ್ಐ ನೀಡಿದ ದೂರಿನಲ್ಲಿ ಸತ್ಯಾಂಶವಿದೆ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಸಂಜಯ್ ಶರ್ಮಾ ಅವರನ್ನು ಸಸ್ಪೆಂಡ್ ಮಾಡಲಾಗಿದೆಯಲ್ಲದೇ ಅವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಹೇಳಲಾಗಿದೆ.

Write A Comment