ಮುಂಬೈ: ಮನೆಯಿಂದ ದೂರವಾಗಿದ್ದ ಬಾಲಕಿಯನ್ನು ಆಕೆಯ ಸ್ವಂತ ಸ್ಥಳಕ್ಕೆ ಸೇರಿಸುವ ಕಥಾಹಂದರ ಇರುವ, ಪ್ರೇಕ್ಷಕರ ಮನಸೆಳೆದ ‘ಭಜರಂಗಿ ಭಾಯಿಜಾನ್’ ನಾಯಕ ಸಲ್ಮಾನ್ ಖಾನ್ ರಿಯಲ್ ಮುನ್ನಿಯನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ದಶಕದ ಹಿಂದೆ ಆಕಸ್ಮಿಕವಾಗಿ ಗಡಿ ದಾಟಿ ಪಾಕ್ ಸೇರಿದ ಮಾತು ಬಾರದ ಭಾರತದ ಯುವತಿ ‘ಗೀತಾ’ಳನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆಗಳು ಮುಂದುವರೆದಿವೆ. 11ನೇ ವಯಸ್ಸಿನಲ್ಲಿ ಪಾಕ್ ಗಡಿಯೊಳಗೆ ಆಕಸ್ಮಿಕವಾಗಿ ಕಾಲಿಟ್ಟ ‘ಗೀತಾ’ಗೆ ಈಗ 20 ವರ್ಷ. ಈಕೆ ಕರಾಚಿಯ ಈದಿ ಫೌಂಡೇಷನ್ ನ ಅನಾಥಾಶ್ರಮದಲ್ಲಿದ್ದಾಳೆ.
ಈ ನಡುವೆ ಭಾರತದ ಕೆಲ ಕುಟುಂಬಗಳು ಆಕೆ ತಮ್ಮ ಮಗಳೆಂದು ಹೇಳಿರುವುದಾಗಿ ಸುದ್ದಿಯಾಗಿತ್ತು. ಈಗ ಭಾಯಿಜಾನ್ ಸಲ್ಮಾನ್, ಗೀತಾ ಪೋಷಕರ ಮಡಿಲು ಸೇರಬೇಕು.ಆಕೆ ಭಾರತಕ್ಕೆ ಬಂದಾಗ ಭೇಟಿಯಾಗುವೆ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ಆಕೆಯ ಕುಟುಂಬವಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಆಕೆ ಭಾರತಕ್ಕೆ ಮರಳುವ ವಿಶ್ವಾಸವಿದೆ ಎಂದು ಸಲ್ಮಾನ್ ಆಶಯ ವ್ಯಕ್ತಪಡಿಸಿದ್ದಾರೆ.