ಕರ್ನಾಟಕ

ಬೀಗ ಹುಡುಕಲು ಸಂದಿಯಲ್ಲಿ ಇಣುಕಿ ಸಾವಿಗೀಡಾದ ವ್ಯಕ್ತಿ

Pinterest LinkedIn Tumblr

suಶಿವಮೊಗ್ಗ: ಸಾಧ್ಯವಿಲ್ಲದಿದ್ದರೂ ಸಂದಿಯಲ್ಲಿ ತಲೆ ತೂರಿಸಲು ಹೋದ ವ್ಯಕ್ತಿಯೊಬ್ಭ ಉಸಿರುಕಟ್ಟಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮನೆಯ ಬೀಗ ಹುಡುಕಲು ಹೋದ ವ್ಯಕ್ತಿ ಇಕ್ಕಟ್ಟಾದ ಜಾಗದಲ್ಲಿ ಕುತ್ತಿಗೆ ಸಿಕ್ಕಿಸಿಕೊಂಡಿದ್ದಾರೆ. ಹೊರ ಬರಲಾಗದೇ, ಒಳಗೂ ಹೋಗಲಾಗದೇ ಕೊನೆಗೆ ಇಹಲೋಕವನ್ನೇ ತ್ಯಜಿಸಿದ್ದಾರೆ. ಅಷ್ಷಕ್ಕೂ ಆಗಿದ್ದಾದರೂ ಏನು? ಮುಂದೆ ಓದಿ,

ಮೃತ ವ್ಯಕ್ತಿಯ ಹೆಸರು ನವೀನ್ ಕುಮಾರ್. ಸಾಗರದ ನೆಹರೂ ನಗರ ಬಡಾವಣೆ ನಿವಾಸಿ. ಪತ್ನಿ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾರೆ. ಈತ ಮನೆಗೆ ಬಂದಾಗ ಬೀಗ ಹಾಕಿತ್ತು. ಸುಮ್ಮನಿರದ ನವೀನ್ ಕುಮಾರ್ ಮನೆಯ ಗೋಡೆಯೇರಿ ಬೀಗ ಎಲ್ಲಿದೆ ಎಂದು ನೋಡಲು ಸಂದಿಯಲ್ಲಿ ಇಣುಕಿದ್ದಾರೆ. ಆಗ ಇಕ್ಕಟ್ಟಿನಲ್ಲಿ ಕುತ್ತಿಗೆ ಸಿಲುಕಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾಗರ ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment