ರಾಷ್ಟ್ರೀಯ

7 ತಿಂಗಳಲ್ಲಿ ದೇಶದ 41 ಹುಲಿಗಳ ಸಾವು

Pinterest LinkedIn Tumblr

tigerಪುಣೆ: ಹುಲಿ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಕಷ್ಟು ಪರಿಶ್ರಮ ವಹಿಸಿದ್ದರೂ, ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಿದೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಹುಲಿಗಳು ಸತ್ತಿವೆ.

ಈ ವರ್ಷ ಜನವರಿಯಿಂದ ಆಗಸ್ಟ್‌ 9ರವರೆಗೆ ದೇಶ 41 ಹುಲಿಗಳನ್ನು ಕಳೆದುಕೊಂಡಿದೆ. ಈ ಸಂಖ್ಯೆ 2014ನೇ ಸಾಲಿನ ಈ ಅವಧಿಯಲ್ಲಿ ಸುಮಾರು ಇಷ್ಟೇ ಇತ್ತು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಹಾಗೂ ವನ್ಯಜೀವಿ ಸಂರಕ್ಷಣೆ ಸಮಿತಿ ಟ್ರಾಫಿಕ್‌- ಇಂಡಿಯಾದ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.

2014ರ ಆಗಸ್ಟ್‌ 9ರವರೆಗಿನ ಅಂಕಿ ಅಂಶದ ಪ್ರಕಾರ, ಮಹಾರಾಷ್ಟ್ರದಲ್ಲಿ 3 ಹುಲಿಗಳು ಮೃತಪಟ್ಟಿದ್ದವು. ಈ ಪೈಕಿ ಒಂದು ಹುಲಿ ಶಾರ್ಪ್‌ ಶೂಟರ್ಸ್‌ ಗುಂಡಿಗೆ ಬಲಿಯಾಗಿದೆ. ಆದರೆ, ಈ ವರ್ಷ ರಾಜ್ಯದಲ್ಲಿ ಹುಲಿಗಳ ಸಾವಿನ ಸಂಖ್ಯೆ 5 ದಾಟಿದೆ.

ಸಾವಿಗೆ ಕಾರಣಗಳೇನು ?

ಎಲ್ಲ ಹುಲಿಗಳ ಸಾವು ಸಹಜವಲ್ಲ. ಮನುಷ್ಯರ ಜತೆಗಿನ ಸಂಘರ್ಷದ ಪ್ರಕರಣಗಳಲ್ಲಿ ಹುಲಿಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಬೇಟೆ, ಉರುಲು ಮತ್ತು ಬಲೆಗೆ ಬಿದ್ದು ಕೆಲ ಹುಲಿಗಳು ಸತ್ತಿವೆ. ವಿಷದಿಂದಲೂ ಮೃತಪಟ್ಟಿವೆ ಎಂದು ಹುಲಿಗಳ ಸಾವಿನ ಕಾರಣಗಳನ್ನು ಪಟ್ಟಿ ಮಾಡಲಾಗಿದೆ.

Write A Comment