ರಾಷ್ಟ್ರೀಯ

ಖರ್ಗೆ ಪ್ರತೀ ಪ್ರಶ್ನೆಗೂ ಸುಷ್ಮಾ ಎದಿರೇಟು ಕೊಟ್ಟಿದ್ದು ಹೇಗೆ?

Pinterest LinkedIn Tumblr

Sushmaಹೊಸದಿಲ್ಲಿ: ಮುಂಗಾರು ಅಧಿವೇಶನವನ್ನೇ ನುಂಗಿದ ಲಲಿತ್ ಮೋದಿ ಪ್ರಕರಣದ ಚರ್ಚೆಗೆ ಬುಧವಾರ ಲೋಕಸಭೆಯಲ್ಲಿ ಸ್ಪೀಕರ್ ಅವಕಾಶ ಮಾಡಿಕೊಟ್ಟರು.

ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನಿಲುವಳಿ ಸೂಚನೆ ಮಂಡಿಸಿದ ಹಿನ್ನೆಲೆಯಲ್ಲಿ ಚರ್ಚೆ ನಡೆಯಿತು. ಸುಷ್ಮಾಗೆ ಅವರು ಏಳು ಪ್ರಶ್ನೆಗಳನ್ನು ಕೇಳಿದ್ದು, ಅವಕ್ಕೆ ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆಯೇ ಸುಷ್ಮಾ ಸದನಕ್ಕೆ ಉತ್ತರಿಸಿದ್ದಾರೆ. ಏನವು?

1. ನಾನು ಯಾವುದೇ ತಪ್ಪೆಸೆಗಿಲ್ಲ ಲಲಿತ್ ಮೋದಿಗೆ ಪ್ರಯಾಣ ದಾಖಲೆ ಒದಗಿಸಲು ಸಹಕರಿಸಿದ್ದಾರೆ, ಎಂಬ ಆರೋಪವನ್ನು ತಳ್ಳಿ ಹಾಕಿದ ಸುಷ್ಮಾ, ಮಾನವೀಯ ಆಧಾರದ ಮೇಲೆ ಸಹಕರಿಸಿರುವುದಾಗಿ ಎಂದು ಪುನರುಚ್ಚರಿಸಿದ್ದಾರೆ.

2.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮಗಳಾಗಲಿ, ಪತಿಯಾಗಲಿ ಒಂದೇ ಒಂದು ರೂಪಾಯಿಯನ್ನೂ ಪಡೆದಿಲ್ಲ.

3. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಜಾರಿ ನಿರ್ದೇಶನಾಲಯ ಲಲಿತ್ ಮೋದಿ ವಿರುದ್ಧ ಏನನ್ನೂ ಮಾಡಿರಲಿಲ್ಲ. ನಾಲ್ಕು ವರ್ಷಗಳಿಂದಲೂ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ.

4.ಯುಪಿಎ ಸರಕಾರ ಅಧಿಕಾರದಲ್ಲಿರುವಾಗಲೇ ಲಲಿತ್ ಮೋದಿಗೆ ಬ್ರಿಟನ್‌ನಲ್ಲಿ ವಾಸಿಸುವ ಹಕ್ಕು ಸಿಕ್ಕಿತು.

5.ಭೋಪಾಲ್ ಅನಿಲ ದುರಂತಕ್ಕೆ ಕಾರಣರಾದ ಯೂನಿಯನ್ ಕಾರ್ಬೈಡ್ ಮುಖ್ಯಸ್ಥ ವಾರನ್ ಆ್ಯಂಡರ್ಸನ್ ಅವರು ಅಮೆರಿಕಕ್ಕೆ ಹೋಗಲು ರಾಜೀವ್ ಗಾಂಧಿ ಸಹಕರಿಸಿದ್ದರು.

6. ಕಾಂಗ್ರೆಸ್‌ನ ಚಿದಂಬರಂ ಸಹ ಹಿತಾಸಕ್ತಿಯ ಸಂಘರ್ಷದಲ್ಲಿ ಭಾಗಿಯಾಗಿದ್ದರು. ಅವರು ವಿತ್ತ ಸಚಿವರಾಗಿದ್ದಾಗ, ಅವರ ಪತ್ನಿ ನಳಿನಿ ವಕೀಲಿಕೆಗಾಗಿ ಶಾರದ ಗ್ರೂಪ್‌ನಿಂಗ 1 ಕೋಟಿ ರೂ.ಪಡೆದಿದ್ದರು. ಇದನ್ನೇ ಹಿತಾಸಕ್ತಿಯ ಸಂಘರ್ಷ ಎಂದು ಕರೆಯುವುದು.

7.ರಾಹುಲ್ ಗಾಂಧಿ ಅವರ ಪರಿವಾರದ ಇತಿಹಾಸ ಓದಲಿ.

8.ನಂತರ ಅವರ ಅಮ್ಮನನ್ನು ‘ಕ್ವಟ್ರೋಚಿಯಿಂದ ಪಡೆದ ಹಣವೆಷ್ಟು?,’ ಎಂದು ಕೇಳಲಿ.

Write A Comment