ಕರ್ನಾಟಕ

ಮಲ್ಲಪ್ರಭಾ-ಮಹಾದಾಯಿ ನದಿಜೋಡಣೆ : ದೆಹಲಿಗೆ ನಿಯೋಗ

Pinterest LinkedIn Tumblr

sidduಬೆಂಗಳೂರು, ಆ.12- ಮಲಪ್ರಭಾ ಹಾಗೂ ಮಹದಾಯಿ ನದಿ ಜೋಡಣೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರೈತರ ನಿಯೋಗದೊಂದಿಗೆ ತೆರಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಸಿಎಂ ಮೈಸೂರಿಗೆ ತೆರಳುವ ವೇಳೆ ಪಕ್ಷಾತೀತ ಹೋರಾಟ ಸಮಿತಿ ಕಾರ್ಯಕರ್ತರು ಅವರ ನಿವಾಸದ ಬಳಿ ರೈತರ ಆತ್ಮಹತ್ಯೆ ತಡೆ  ಹಾಗೂ ಕಳಸಾ ಬಂಡೂರಿ ಯೋಜನೆ ಕಾರ್ಯಗತಕ್ಕೆ ಒತ್ತಾಯಿಸಿ ಸಿಎಂ ಮನೆ ಮುಂದೆ ಧರಣಿ ನಡೆಸಿದ್ದರಿಂದ ರೈತರೊಂದಿಗೆ ಮಾತುಕತೆ ನಡೆಸಿದ ನಂತರ  ಭರವಸೆ ವ್ಯಕ್ತಪಡಿಸಿದರು.

ನೀರಾವರಿ, ಕೃಷಿ ಕ್ಷೇತ್ರದಲ್ಲಿ ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು  ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಅದರಲ್ಲೂ ಮಲಪ್ರಭಾ ಹಾಗೂ ಮಹದಾಯಿ  ನದಿ ಜೋಡಣೆಯಿಂದ ನೀರಿನ ಸಮಸ್ಯೆ ನೀಗಿ ನೀರಿಲ್ಲದೆ ಬೆಳೆ ನಷ್ಟ ಅನುಭವಿಸುವ ರೈತರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ದೂರಾಗುತ್ತದೆ. ಜೊತೆಗೆ ಕೃಷಿ ಕ್ಷೇತ್ರದ ಹಲವಾರು ಕೆಲಸಗಳಿಗೆ ಹಾಗೂ ಕುಡಿಯುವ ನೀರಿಗೂ ಇದರಿಂದ ಉಪಯೋಗವಾಗಲಿದೆ ಎಂದು ಹೇಳಿದರು.ಪ್ರಧಾನಿ ಬಳಿಗೆ ಪ್ರತಿಪಕ್ಷಗಳು ಹಾಗೂ ರೈತರನ್ನೊಳಗೊಂಡ ನಿಯೋಗ ತೆರಳಲು  ಸಮಯ ನಿಗದಿಗೆ ಕೋರಲಾಗಿದ್ದು, ಸಮಯಾವಕಾಶ ನೀಡಿದ ಕೂಡಲೇ ಭೇಟಿ ಮಾಡುವುದಾಗಿ ತಿಳಿಸಿದರು.

ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೂ ಮನವಿ ಸಲ್ಲಿಸಲಾಗುವುದು ಎಂದ ಅವರು, ರಾಜ್ಯದ ರೈತರ ಸಂಕಷ್ಟಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಳ್ಳಲಿದೆ. ಯಾವುದೇ ರೈತರು ಹತಾಶರಾಗಿ  ಜೀವ ಕಳೆದುಕೊಳ್ಳಬೇಕಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷಾತೀತ ಹೋರಾಟ ಸಮಿತಿಯ ಸತೀಶ್ ಚಂದ್ರ ಹೊಸಮನಿ ನೇತೃತ್ವದಲ್ಲಿ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರೊಂದಿಗೆ ಚರ್ಚೆ ನಡೆಸಿದ ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಿದರು.

Write A Comment