ಮನೋರಂಜನೆ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹೊಡಿ ಬಡಿ ಕಬಡ್ಡಿ

Pinterest LinkedIn Tumblr

kabbaddiಕಳೆದ ಮೂರು ದಿನಗಳಿಂದ ಮಳೆಯ ಆಟದಲ್ಲಿ ಮಿಂದೆದ್ದಿರುವ ಸಿಲಿಕಾನ್ ಸಿಟಿ ಜನರಿಗೆ ಇಂದಿ ನಿಂದ ನಾಲ್ಕು ದಿನಗಳ ಕಾಲ ಕಬಡ್ಡಿಯ ರಣರಂಗದಲ್ಲಿ ಮಿಂದೇಳುವ ಸೌಭಾಗ್ಯ ಒದಗಿ ಬಂದಿದೆ.   ಪ್ರೋ ಕಬಡ್ಡಿ  ಲೀಗ್‌ನ 2 ನೆ ಆವೃತ್ತಿಯ ಸೆಮಿಫೈನಲ್ ಪಂದ್ಯಗಳು ಸಮೀಪಿಸುತ್ತಿದ್ದಂತೆ ಎಲ್ಲಾ 8 ತಂಡಗಳ ಆಟಗಾರರಲ್ಲಿ  ಹುಮ್ಮಸ್ಸು  ಮೇಳೈಸಿದ್ದು ತಮ್ಮ ತಂಡವನ್ನು ಸೆಮಿಫೈನಲ್ ಹಂತಕ್ಕೆ ಏರಿಸುವ ಕಾತರದಲ್ಲಿದ್ದಾರೆ.ಈಗಾಗಲೇ  ಬೆಂಗಾಳ್ ವಾರಿಯರ್ಸ್ಬ ಹಾಗೂ  ಪುನೇರಿ ಪಾಲ್ಟನ್ಸ್ ಸೆಮಿಫೈನಲ್ ಹಾದಿಯಿಂದ ಬಹುತೇಕ ಹೊರ ಬಿದ್ದಿದ್ದರೂ ಕೂಡ ಉಳಿದ ಪಂದ್ಯಗಳಲ್ಲಿ ಎದುರಾಳಿ ತಂಡಗಳ ವಿರುದ್ಧ ಉತ್ತಮ  ಪ್ರದರ್ಶನ ತೋರುವ ಹುಮ್ಮಸ್ಸಿನಲ್ಲಿದ್ದಾರೆ.
ನಮ್ಮ ಕನ್ನಡ ನಾಡಿನ ತಂಡವೆಂದೇ ಬಿಂಬಿಸಿಕೊಂಡಿರುವ  ಬೆಂಗಳೂರು ಬುಲ್ಸ್ ತಂಡವು ಆಡಿದ  9 ಪಂದ್ಯಗಳಲ್ಲಿ 6 ಗೆಲುವಿ ನೊಂದಿಗೆ 31 ಅಂಕಗಳೊಂ ದಿಗೆ  4ನೇ ಸ್ಥಾನದಲ್ಲಿದ್ದು ಈಗ ಅಂಕ ಪಟ್ಟಿಯಲ್ಲಿ  ಮೇಲಕ್ಕೇ ರಲು ಆ ತಂಡಕ್ಕೆ ತಾಯ್ನಾಡಿನ  ಕಬ್ಬಡಿ ಪ್ರೇಮಿಗಳ ಬೆಂಬಲವೂ ಸಿಕ್ಕಿದೆ.

ಮೊದಲ ಪಂದ್ಯವೇ ಕಠಿಣ:

ಇಂದು  ನಗರದ ಕಂಠೀರವಾ ಸ್ಟೇಡಿಯಂ ನಲ್ಲಿ ಪ್ರೊ ಕಬಡ್ಡಿ 2ನೆ ಆವೃತ್ತಿಯ ಮೊದಲ ಪಂದ್ಯವನ್ನು ಆಡುತ್ತಿರುವ ಬೆಂಗಳೂರು ಬುಲ್ಸ್‌ಗೆ ಅನುಪ್‌ಕುಮಾರ್  ನಾಯಕತ್ವದ ಯು ಮುಂಬಾ ಕಠಿಣ ಸವಾಲನ್ನು ನೀಡಲಿದೆ.
ಯು ಮುಂಬಾ ತಂಡವು ಆಡಿರುವ 10 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದು 45 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಸರಣಿಯ ಮೊದಲ ಪಂದ್ಯದಲ್ಲಿ  ಯು ಮುಂಬಾ ತಂಡದ ವಿರುದ್ಧ  ಮಂಜಿತ್ ಚಿಲ್ಲರ್ ನಾಯಕತ್ವದ ಬೆಂಗಳೂರು  ಬುಲ್ಸ್ ಸೋತಿದ್ದರೂ ಈಗ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ.ಸೂಪರ್ ಟಾಕಲ್‌ನಲ್ಲಿ ಎಡವುವ ಚಿಲ್ಲರ್: ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರುತ್ತಿರುವ ಬುಲ್ಸ್ ನಾಯಕ ಮಂಜಿತ್‌ಚಿಲ್ಲರ್ ರೈಡರ್‌ನಲ್ಲಿ ಮಾತ್ರವಲ್ಲದೆ, ಉತ್ತಮ ಡಿಫೆಂಡರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಪಾಟ್ನಾ ಪೈರೇಟ್ಸ್  ವಿರುದ್ಧದ  ಪಂದ್ಯದಲ್ಲಿ ಸೂಪರ್ ಟಾಕಲ್‌ನಲ್ಲಿ  ಮಂಜಿತ್ ಪಾಯಿಂಟ್ಸ್ ಕದಿಯಲು ವಿಫಲವಾಗಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಪಂದ್ಯಗಳ ವಿವರ:

12 ಆಗಸ್ಟ್ : ಬೆಂಗಳೂರು ಬುಲ್ಸ್  /ಖ ಯು ಮುಂಬಾ, ಸಮಯ: ರಾ.8ಕ್ಕೆ
13 ಆಗಸ್ಟ್ :  ಬೆಂಗಾಳ್ ವಾರಿಯರ್ಸ್ು  /ಖಪುನೇರಿ ಪಾಲ್ಟನ್ , ಸಮಯ: ರಾ.8ಕ್ಕೆ
13 ಆಗಸ್ಟ್ : ಬೆಂಗಳೂರು ಬುಲ್ಸ್ /ಖಜೈಪುರ್ ಪಿಂಕ್ ಪ್ಯಾಥರ್ಸ್ನ , ಸಮಯ: ರಾ.9ಕ್ಕೆ
14 ಆಗಸ್ಟ್ : ಬೆಂಗಾಳ್ ವಾರಿಯರ್ಸ್ು /ಖಪಾಟ್ನಾ ಪೈರೇಟ್ಸ್ ಸವಯ: ರಾ. 8ಕ್ಕೆ
14 ಆಗಸ್ಟ್ : ಬೆಂಗಳೂರು ಬುಲ್ಸ್ /ಖದಬಾಂಗ್ ಡೆಲ್ಲಿ ಸಮಯ: ರಾ.9ಕ್ಕೆ
15 ಆಗಸ್ಟ್ : ಪಾಟ್ನಾ ಪೈರೇಟ್ಸ್  /ಖಯು ಮುಂಬಾ ಸಮಯ: ರಾ.8ಕ್ಕೆ
15 ಆಗಸ್ಟ್ : ಬೆಂಗಳೂರು ಬುಲ್ಸ್ /ಖ ತೆಲುಗು ಟೈಟಾನ್ಸ್ , ಸಮಯ: ರಾ.9ಕ್ಕೆ

Write A Comment