ಮನೋರಂಜನೆ

ಹಿಂದಿ ತಿಳಿಯದ ಮಂದಿ, ಬಾಲಿವುಡ್ ತಾರೆಯರಿಗೂ ಭಾಷೆ ಬರೊಲ್ಲ

Pinterest LinkedIn Tumblr

bollywoodಇನು ಕಾಮನ್‌ಸೆನ್ಸ್. ಐಪಿಎಲ್ ಆಡೋಕ್ಕೆ ಬ್ಯಾಟ್ ಬೀಸಲು ಬರ್ಬೇಕು, ವಿಂಬಲ್ಡನ್‌ನಲ್ಲಿ ಪಾಲ್ಗೊಳ್ಳೋಕೆ ಟೆನಿಸ್ ಗೊತ್ತಿರ್ಬೇಕು, ಎಲೆಕ್ಷನ್ನಿಗೆ ನಿಲ್ಲೋಕ್ಕೆ ಮಾತನಾಡಲು ಬರ್ಬೇಕು… ಎಲ್ಲ ಸರಿ. ಹಾಗೆಯೇ ಬಾಲಿವುಡ್‌ನಲ್ಲಿ ಆಕ್ಟ್ ಮಾಡಲು ಹಿಂದಿ ಗೊತ್ತಿರ್ಬೇಕು ಅನ್ನೋದು ನಮಗೆಲ್ಲ ಗೊತ್ತು. ಆದರೆ, ಈ ಬಾಲಿವುಡ್‌ನಲ್ಲಿ ಹಿಂದಿ ಗೊತ್ತಿಲ್ಲದೇ ಸ್ಟಾರ್ ಪಟ್ಟದಲ್ಲಿ ಮೆರೆದವರಿದ್ದಾರೆ ಮತ್ತು ಮೆರೆಯುತ್ತಲೂ ಇದ್ದಾರೆ. ಇವರಿಗೆ ಹಿಂದಿ ನೆಟ್ಟಗೆ ಬರೋಲ್ಲ ಎಂದರೇ ಬಹುಶಃ ನಂಬಲಿಕ್ಕಿಲ್ಲ. ಆದರೂ ನಾವು ಅವರನ್ನು ‘ಹಿಂದಿಜನ’ ಎಂದು ಒಪ್ಪಿಕೊಂಡಿದ್ದೇವೆ.

ಅದರಲ್ಲೂ ಕೆಲವು ನಟಿಯರು ಮುಂಬೈಗೆ ಬಂದು ಅನೇಕ ವರ್ಷಗಳೇ ಆದವು. ಇನ್ನೂ ಹಿಂದಿ ಮಾತನಾಡಲು ಹಿಂದೆ ಮುಂದೆ ನೋಡುತ್ತಾರೆ. ಅದು ಈಗಿನ ನಟಿಯರಷ್ಟೇ. ಹಿಂದೆ ಹೇಮಾ ಮಾಲಿನಿ ಮತ್ತು ಶ್ರೀದೇವಿ ಅವರೆಲ್ಲ ದಕ್ಷಿಣದಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟವರು. ಕೆಲ ಕಾಲ ಹಿಂದಿ ಮಾತನಾಡಲು ತೊದಲಿದರೂ, ನಂತರ ಹಿಂದಿಯನ್ನು ರೂಢಿಸಿಕೊಂಡೇ ನಂ.1 ಸ್ಥಾನಕ್ಕೇರಿದ್ದರು. ಆದರೆ, ಈಗಿನವರು ಈ ಭಾಷಾಪ್ರೇಮವನ್ನು ಅಪ್ಪಿಕೊಳ್ಳಲೂ ತಯಾರಿದ್ದಂತಿಲ್ಲ. ಹಿಂದಿ ಕಲಿಯಲು ಯತ್ನಿಸಿದರು ಅದು ಸುಲಲಿತವಾಗಿ ಒಲಿಯಲಿಲ್ಲ. ಅಂಥ ನಟಿಯರು ಯಾರ್ಯಾರು ಗೊತ್ತಾ?

ಕತ್ರಿನಾ ಕೈಫ್

ಸದ್ಯ ಬಾಲಿವುಡ್‌ನಲ್ಲಿ ಹೆಚ್ಚು ಡಿಮ್ಯಾಂಡ್ ಸೃಷ್ಟಿಸಿಕೊಂಡಿರುವ ಕತ್ರೀನಾಗೆ ಇನ್ನೂ ಹಿಂದಿ ತಿಳಿದಿಲ್ಲ. ಸೆಟ್‌ನಲ್ಲಿ ಮಾತನಾಡಲು ಹಿಂಜರಿಯುತ್ತಾಳೆ. ಹಾಂಕಾಂಗ್‌ನ ಈ ಚೆಲುವೆಗೆ ಇಂಗ್ಲಿಷೇ ಸುಲಲಿತ. ಈಕೆಯ ಡೈಲಾಗ್‌ಗಳನ್ನು ಇವತ್ತಿಗೂ ಪ್ರೊಫೆಷನಲ್ ಡಬ್ಬಿಂಗ್ ಆರ್ಟಿಸ್ಟ್‌ಗಳು ಡಬ್ ಮಾಡುತ್ತಲೇ ಇದ್ದಾರೆ. ಟಿವಿ ಶೋಗಳಲ್ಲಿ ಸಲ್ಮಾನ್ ಖಾನ್ ಇದೇ ವಿಚಾರವಾಗಿ ಸಾಕಷ್ಟು ಸಲ ಕಾಲು ಎಳೆದದ್ದೂ ನಿಮಗೆ ಗೊತ್ತಿರಬಹುದು. ಕತ್ರಿನಾ ಹಿಂದಿ ಕಲಿಯಲು 3 ಸಲ ಟ್ರೈನಿಂಗ್ ತೆಗೆದುಕೊಂಡರೂ ರಾಷ್ಟ್ರಭಾಷೆ ಒಲಿಯಲಿಲ್ಲ.

ನರ್ಗಿಸ್ ಫಖ್ರಿ

ತೀರಾ ಉದ್ದುದ್ದದ ಹಿಂದಿ ಸಂಭಾಷಣೆ ಹೇಳಬೇಕು ಅಂದ್ರೆ ಚೀನೀ ಉಚ್ಚಾರ ಮಾಡಿದ ಹಾಗಾಗುತ್ತೆ ಎನ್ನುವ ಈ ಚೆಲುವೆಗೆ ಹಿಂದಿ ಇನ್ನೂ ಒಗ್ಗಲಿಲ್ಲ. ಅಮೆರಿಕದಲ್ಲಿ ಹುಟ್ಟಿದ ನರ್ಗಿಸ್‌ಗೆ ಹಿಂದಿಯಲ್ಲಿ ಅದಾಗಲೇ ನಾಲ್ಕೈದು ಸಿನಿಮಾಗಳಾಗಿವೆ.

ಈಕೆಯ ತಂದೆ ಪಾಕಿಸ್ತಾನಿ, ತಾಯಿ ಝೆಕ್. ಮೊದಲ ಸಿನಿಮಾ ‘ರಾಕ್‌ಸ್ಟಾರ್‌ನಲ್ಲಿ ನಟಿಸುವಾಗ ಈಕೆಗೆ ಹಿಂದಿ ಅರ್ಥವೇ ಆಗುತ್ತಿರಲಿಲ್ಲ. ಈಗ ಪರ್ವಾಗಿಲ್ಲ. ಆದರೆ ಸಂಭಾಷಣೆ ತೀರಾ ಕಷ್ಟ.

ಜಾಕ್ವೆಲಿನಾ ಫರ್ನಾಂಡಿಸ್

ಶ್ರೀಲಂಕಾದ ಈ ಚೆಲುವೆ ಹಿಂದಿಯಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾಳೆ. ತಂದೆ ಶ್ರೀಲಂಕನ್, ತಾಯಿ ಮಲೇಷ್ಯನ್. ಈಕೆಯ ಸುಂದರ ಕಾಲುಗಳನ್ನು ನೋಡಿಯೇ ಸುಜಯ್ ಘೋಷ್ ‘ಅಲಾದಿನ್‌’ ಸಿನಿಮಾಕ್ಕೆ ಆರಿಸಿಕೊಂಡರಂತೆ. ಹಿಂದಿ ಬರದಿದ್ದರೂ ಮ್ಯಾನೇಜ್ ಆಗುತ್ತೆ ಅಂತ ಘೋಷ್ ಹೇಳಿದ್ದು ಇನ್ನೂ ಈಕೆಯ ಕಿವಿಯಲ್ಲಿದೆ. ಈಗಲೂ ಈಕೆಯ ಹಿಂದಿ ಅಷ್ಟು ಪರ್ಫೆಕ್ಟಿಲ್ಲ.

ಇಲಿಯಾನಾ

ಈಕೆ ಇತ್ತೀಚೆಗಷ್ಟೇ ಬಾಲಿವುಡ್ ಸೇರಿಕೊಂಡ ಹುಡುಗಿ. ಹಿಂದಿ ಪೂರ್ತಿ ಗೊತ್ತಿಲ್ಲ. ಇಲಿಯಾನಾ ಮುಂಬೈನಲ್ಲೇ ಹುಟ್ಟಿದರೂ, ಮನೆಭಾಷೆ ಕೊಂಕಣಿಯಾದ ಕಾರಣ ನಾಲಿಗೆ ಮೇಲೆ ಅದೇ ನೆಲೆ ಆಯಿತು. ಮುಂದೆ ಸಿನಿಮಾಗೆ ಅಂತ ಹೈದರಾಬಾದ್‌ಗೆ ಬಂದ ಮೇಲೆ ತೆಲುಗು ಒಲಿಯಿತು. ಚಿತ್ರರಂಗ ಸೇರಿ 6 ವರ್ಷದ ಬಳಿಕ ಹಿಂದಿಯ ‘ಬರ್ಫಿ’ಯಲ್ಲಿ ಮೊದಲ ಆಫರ್ ಸಿಕ್ಕಿತು. ಅದೂ ಸೈಲೆಂಟ್ ಸಿನಿಮಾ. ನಂತರದ ‘ಫಟಾ ಪೋಸ್ಟರ್ ನಿಕ್ಲಾ ಹೀರೋ’ದಲ್ಲೂ ಈಕೆಯ ಡೈಲಾಗ್‌ಗಳಿಗೆ ಡಬ್ಬಿಂಗ್ ಆರ್ಟಿಸ್ಟ್‌ಗಳೇ ಕಂಠದಾನ ಮಾಡಿದರು.

ಲಿಸಾ ಹೇಡನ್

ಲ್ಯಾಕ್ಮೆ ಮಾಡೆಲ್‌ನ ಈ ಬೆಡಗಿ ರಾಸ್ಕಲ್ ಸಿನಿಮಾದಿಂದ ಬಾಲಿವುಡ್‌ಗೆ ಕಾಲಿಟ್ಟಳು. ಕಪಿಲ್ ಶರ್ಮಾರ ಟಿವಿ ಶೋಗಳಲ್ಲಿ ಅನುಪಮ್ ಖೇರ್ ಮತ್ತೆ ಮತ್ತೆ ಈಕೆಗೆ ಸೂಚನೆ ಕೊಡುತ್ತಲೇ ಇದ್ದರು; ಮುಂದಿನ ಸಲ ಬರ್ತಾ ಹಿಂದಿ ಕಲಿತ್ಕೊಂಡ್ ಬಾ ಅಂತ. ಲಿಸಾ ಇದಕ್ಕೆ ಸ್ಮೈಲ್ ಕೊಟ್ಟು ಸುಮ್ಮನಾಗುತ್ತಿದ್ದಳು. ರಾಸ್ಕಲ್ ನಂತರದ ‘ಕ್ವೀನ್‌’ ಚಿತ್ರದಲ್ಲಿ ಈಕೆಗೆ ಹಿಂದಿ ಸಮಸ್ಯೆ ಆಗಲಿಲ್ಲ. ಏಕೆಂದರೆ, ಅಲ್ಲಿ ಅವಳು ದೇಸಿ ಹುಡುಗಿಯೇ ಆದರೂ ಪ್ಯಾರಿಸ್‌ನಲ್ಲಿ ಇರುವಂಥವಳು. ಲಿಸಾ ಕೂಡ ಎರಡು ಸಲ ಹಿಂದಿ ಕ್ಲಾಸಿಗೆ ಸೇರಿಕೊಂಡವಳು.

ಸನ್ನಿ ಲಿಯೋನ್

‘ಬಿಗ್‌ಬಾಸ್‌’ ಮೂಲಕ ಭಾರತೀಯ ನಟನಾ ಲೋಕಕ್ಕೆ ಕಾಲಿಟ್ಟ ಕೆನಡಾದ ಈ ಪೋರ್ನ್ ತಾರೆಗೆ ಈಗಲೂ ಇಂಗ್ಲಿಷೇ ಬೆಸ್ಟು. ‘ಜಿಸ್ಮ್ 2’ ಈಕೆಯ ಮೊದಲ ಹಿಂದಿ ಸಿನಿಮಾ. ಒಟ್ಟಾರೆ 10 ಸಿನಿಮಾಗಳಲ್ಲಿ ಸನ್ನಿ ಕಾಣಿಸಿಕೊಂಡಿದ್ದಾಳೆ. ಒಮ್ಮೆ ಕ್ಲಾಸ್‌ಗೂ ಸೇರಿದ್ದಳು. ಆದರೂ ಹಿಂದಿಯಲ್ಲಿ 100ಕ್ಕೆ 2 ಅಂಕ!

Write A Comment