ಮನೋರಂಜನೆ

ನಾಳೆಯಿಂದ ಶುರುವಾಗಲಿದೆ ಉಪ್ಪಿಯ ಕಮಾಲ್ !

Pinterest LinkedIn Tumblr

uppi-2

ಉಪ್ಪಿಯ ಕಮಾಲ್ ನಾಳೆಯಿಂದ ಶುರುವಾಗಲಿದೆ. ಹಲವಾರು ವರ್ಷಗಳ ಗ್ಯಾಪ್‌ನ ನಂತರ ಉಪೇಂದ್ರ ಅವರ ಹೋಂ ಬ್ಯಾನರ್‌ನಿಂದ ಚಿತ್ರವೊಂದು ನಿರ್ಮಾಣವಾಗಿದೆ. ದಶಕದ ನಂತರ ಬರುತ್ತಿರುವ ಈ ಚಿತ್ರ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಉಪೇಂದ್ರ ನಿರ್ದೇಶನ ಹಾಗೂ ನಟನೆಯಲ್ಲಿ ಬಂದಿದ್ದ ಉಪೇಂದ್ರ ಚಿತ್ರ 20 ವರ್ಷಗಳ ಹಿಂದೆ ತೆರೆಕಂಡಿತು. ಚಿತ್ರರಂಗದಲ್ಲೇ ಒಂದು ಹೊಸ ಶೈಲಿಯ ನಿರೂಪಣೆಯಿಂದ ಆ ಚಿತ್ರ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ನೋಡುವಂತೆ ಆಕರ್ಷಿಸಿತ್ತು. ಸದ್ದು ಮಾಡಿತ್ತು. ಅದಾದ ನಂತರ ಇದೀಗ ಹೊಸ ಹೊಸ ವಿಶೇಷತೆಗಳನ್ನು ಹೊರಗಿಡುತ್ತಿರುವ ಉಪೇಂದ್ರ ಈ ವಾರ ಚಿತ್ರಮಂದಿರಗಳಲ್ಲಿ ತಮ್ಮ ಉಪ್ಪಿ-2 ಬಿಡುಗಡೆ ಮಾಡುತ್ತಿದ್ದಾರೆ. ರಿವರ್ಸ್ ಟ್ರೈಲರ್ ಉಲ್ಟಾ ಕಟೌಟ್ ಸೇರಿದಂತೆ ಇನ್ನು ಹತ್ತು ಹಲವಾರು ಸ್ಪೆಷಲ್‌ಗಳನ್ನು ಉಪ್ಪಿ-2 ಒಳಗೊಂಡಿದೆ.

ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಉಪೇಂದ್ರ 10 ವರ್ಷಗಳ ಹಿಂದೆ ನಾನು, ನಮ್ಮಣ್ಣ ಸೇರಿ ಗೋಕರ್ಣ ಚಿತ್ರವನ್ನು ನಿರ್ಮಿಸಿದ್ದೆವು. ಈಗ ನಾನು ಹಾಗೂ ನನ್ನ ಶ್ರೀಮತಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಈ ಚಿತ್ರದಲ್ಲಿ ನಾನು ಅಲ್ಲ ನೀನು ಅನ್ನೋದನ್ನು ಹೇಳಲು ಹೊರಟಿದ್ದೇನೆ. ನಾನು ಅಂತ ಹೇಳುವವರನ್ನು ನೀನು ಅಂತ ಹೇಳಿಸುವ ಪ್ರಯತ್ನ ಮಾಡಿದ್ದೇನೆ. ಎಲ್ಲರ ಕಾಲು ಎಳೆಯುತ್ತದೆ. ಕಾಲ, ನನ್ನ ಕಾಲನ್ನು ಎಳೆಯುತ್ತದೆ ಕಾಲ ಎಂಬ ಈ ಹಾಡಿನಲ್ಲಿ ಅರ್ಧ ಚಿತ್ರ ಇದೆ.

ಈ ಚಿತ್ರ ನಿಜವಾಗಿಯೂ ಆರಂಭವಾಗಿದ್ದು , 8 ವರ್ಷಗಳ ಹಿಂದೆ, ಒಮ್ಮೆ ಆಟೋವೊಂದರ ಮೇಲೆ ಉಪ್ಪಿ-2 ಅಂತ ಬರೆದಿದ್ದನ್ನು ನೋಡಿದಾಗ ಹೌದು ಯಾಕೆ ಮಾಡಬಾರದು ಎಂಬ ಯೋಚನೆ ಬಂತು. ಅಲ್ಲಿಂದ ಶುರುವಾದದ್ದೇ ಉಪ್ಪಿ-2 ಚಿತ್ರ ಕಥೆಯಲ್ಲಿ ಸಾಕಷ್ಟು ವಿಶೇಷತೆಗಳಿವೆ. ಎಲ್ಲರಿಗೂ ಸಂಬಂಧಪಡುತ್ತದೆ. ಮನುಷ್ಯ ನಾನು ಅನ್ನೋದನ್ನು ಮರೆತು, ಯಾವಾಗ ನೀನು ಅನ್ನುತ್ತಾನೋ ಆವಾಗಲೇ ಆತ ಮುಂದೆ ಬರಲು ಸಾಧ್ಯ ಎಂದು ಹೇಳಿದರು.

ನಟಿ ಪಾರುಲ್ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಂಧ್ರದಲ್ಲಿ ತೆಲುಗು ಆವೃತ್ತಿಯ ಸಿಡಿ ಬಿಡುಗಡೆ ಸಮಾರಂಭ ನಡೆದಿದೆ. ಚಿತ್ರದ ನಿರ್ಮಾಪಕಿ ಪ್ರಿಯಾಂಕ ಮಾತನಾಡಿ, ಯಜಮಾನರ ಜೊತೆ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದು ಖುಷಿಯಾಗಿದೆ. ಕೆಲಸದ ವಿಷಯದಲ್ಲಿ ತುಂಬಾ ಡೆಡಿಕೇಟೆಡ್ ಆಗುತ್ತಿದ್ದರು. ಈ ವಾರ ರಾಜ್ಯಾದ್ಯಂತ ಹಾಗೂ ಪ್ರಪಂಚದಾದ್ಯಂತ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು. ಆಂಧ್ರದಲ್ಲಿ 300ರಿಂದ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ 250ರಿಂದ 300 ಥಿಯೇಟರ್‌ಗಳಲ್ಲಿ ಒಟ್ಟಾರೆ ಪ್ರಪಂಚಾದ್ಯಂತ 1000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಉಪ್ಪಿ-2 ರಾರಾಜಿಸಲಿದೆ. ಕನ್ನಡ ಚಿತ್ರವೊಂದು ಈ ರೀತಿಯಲ್ಲಿ ಪ್ರಚಾರ ತಗೊಂಡಿರುವುದು ಇದೇ ಮೊದಲೆನ್ನಬಹುದಾಗಿದೆ.

ಚಿತ್ರದ ನಾಯಕಿ ಪಾತ್ರವನ್ನು ಕ್ರಿಸ್ಟಿನಾ ಎಂಬ ಫಾರಿನ್ ಚೆಲುವೆ ನಿರ್ವಹಿಸಿದ್ದು ಉಪೇಂದ್ರ ಅವರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿ ದೃಶ್ಯವನ್ನು ಸಂಭಾಷಣೆಗಳನ್ನು ಅರ್ಥ ಮಾಡಿಕೊಂಡು ಅಭಿನಯಿಸಿರುವುದಾಗಿ ಅವರು ಹೇಳಿದ್ದಾರೆ. ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಉಪೇಂದ್ರ. ಅದನ್ನೆಂದೂ ಮರೆಯಲಾರೆ. ರೀರೆಕಾಡಿಂಗ್ ಟೈಂನಲ್ಲಿ ಚಿತ್ರವನ್ನು ನೋಡಿದ್ದೇನೆ. ತುಂಬ ಖುಷಿಯಾಗಿದೆ. ಮುಂದಿನ ಜನರೇಷನ್‌ಗೂ ಕೂಡ ಒಪ್ಪುವಂತಹ ಚಿತ್ರ ಮಾಡುವುದೇ ಉಪೇಂದ್ರರ ಸ್ಟೈಲ್. ನಮ್ಮ ಭಾವನೆಗೆ ತಕ್ಕಂತಹ ಸಿನಿಮಾ ಇದು ಅಂತ ಹೇಳಬಹುದು ಎಂದು ಹೇಳಿದರು.

ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮಾತನಾಡಿ, ಉಪೇಂದ್ರ ಜೊತೆ ಕೆಲಸ ಮಾಡುವುದೇ ಒಂದು ವಿಶೇಷ. ತುಂಬಾ ಅಡ್ವಾನ್ಸ್ ಆಗಿ ಸಿನಿಮಾ ತೆಗೆಯುತ್ತಾರೆ ಎಂದು ಹೇಳಿದರು. ಕಶ್ಯಪ್ ಅವರು ಹೇಳಿದ ಇನ್ನೊಂದು ಮಾತು ತುಂಬಾ ಇಂಟರ್‌ಸ್ಟಿಂಗ್ ಆಗಿದೆ. ಅದೇನೆಂದರೆ ಉಪೇಂದ್ರ ಚಿತ್ರದ ಮುಹೂರ್ತದ ಸಮಯದಲ್ಲಿ ಮಗು ಥರ ಇದ್ದರು. ಚಿತ್ರೀಕರಣದ ಸಮಯದಲ್ಲಿ ರಾಕ್ಷಸನ ಥರ ಆಗ್ತಾರೆ. ಸಿನಿಮಾ ಮುಗಿದ ಮೇಲೆ ದೇವರ ಥರ ಕಾಣ್ತಾರೆ, ಇದು ಸ್ವತಃ ಕಶ್ಯಪ್ ಅವರ ಅನುಭವಕ್ಕೆ ಒಂದು ವಿಷಯವಂತೆ. ಹೆಚ್ಚು ಕುತೂಹಲ ಮೂಡಿಸಿರುವ ಉಪ್ಪಿ-2 ಚಿತ್ರ ಈಗಾಗಲೇ ಉಲ್ಟಾ ಪೋಸ್ಟರ್‌ಗಳ ಕರಾಮತ್ತಿನಿಂದ ಚಿತ್ರ ನೋಡುಗರ ಆಸೆಯನ್ನು ಹಿಮ್ಮಡಿ ಗೊಳಿಸ ಲಿದೆ.

Write A Comment