ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆಯೇ ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆಗಳು ಗ್ರಾಹಕರಿಗೆ ವಿವಿಧ ರೀತಿಯ ಆಫರ್ ಗಳನ್ನು ನೀಡುತ್ತಿವೆ. ಈಗ ಮತ್ತೊಂದು ಸಂಸ್ಥೆ ಸ್ಮಾರ್ಟ್ ಫೋನ್ ಗೆ ಹೊಸ ಆಫರ್ ನೀಡಿದೆ.
ಆನ್ ಲೈನ್ ಶಾಪಿಂಗ್ ಸಂಸ್ಥೆ ಹೋಮ್ ಶಾಪ್ 18, ಜಿಯೋನಿ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಆಫರ್ ನೀಡಿದೆ. ಕೇವಲ ಬೆಲೆಯಲ್ಲಷ್ಟೇ ಅಲ್ಲದೇ ಇದರ ಜೊತೆಗೆ ಉಚಿತ ಕೊಡುಗೆಗಳನ್ನೂ ನೀಡುವುದಾಗಿ ಘೋಷಿಸಿದೆ.
Gionee Elife E7 Mini ಸ್ಮಾರ್ಟ್ ಫೋನ್ ನ್ನು ಕೇವಲ 9,999 ರೂ. ಗಳಿಗೆ ನೀಡುವುದಾಗಿ ಪ್ರಕಟಿಸಿರುವ ಹೋಮ್ ಶಾಪ್ 18, ಟಿವಿಯಲ್ಲಿ ತೋರಿಸುವ ದೂರವಾಣಿ ಸಂಖ್ಯೆ, ಹೋಮ್ ಶಾಪ್ 18 ವೆಬ್ ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಇದನ್ನು ಬುಕ್ ಮಾಡಬಹುದೆಂದು ತಿಳಿಸಿದೆ.
ಇಂದು ರಾತ್ರಿ 8-45 ರಿಂದ ಬುಕ್ಕಿಂಗ್ ಆರಂಭವಾಗಲಿದ್ದು, Gionee Elife E7 Mini ಸ್ಮಾರ್ಟ್ ಫೋನ್ ಜೊತೆಗೆ 999 ರೂ. ಬೆಲೆಯ ಫ್ಲಿಪ್ ಕವರ್, 500 ರೂ. ಬೆಲೆ ಬಾಳುವ ಜಿಸಿ ಹಾಗೂ 299 ರೂ. ಬೆಲೆಯ ಸ್ಕ್ರೀನ್ ಗಾರ್ಡ್ ನೀಡುವುದಾಗಿ ಘೋಷಿಸಿದೆ. Gionee Elife E7 Mini 16 ಜಿಬಿಯ ಈ ಸ್ಮಾರ್ಟ್ ಫೋನ್ ಕಪ್ಪು ಹಾಗೂ ಬಿಳಿಯ ಬಣ್ಣದಲ್ಲಿ ದೊರೆಯುತ್ತವೆ.